ಕಡಬ, ಜೂನ್ 30, 2024 (ಕರಾವಳಿ ಟೈಮ್ಸ್) : ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ. ರಾಜಹಂಸ ಬಸ್ಸು, ವೋಲ್ವೋ ಹಾಗೂ ಈಚರ್ ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಶನಿವಾರ ನಡೆದಿದೆ.
ಕೆ.ಎಸ್.ಆರ್.ಟಿ.ಸಿ. ರಾಜಹಂಸ ಬಸ್ಸಿನ ಚಾಲಕ ಹಾವೇರಿ ನಿವಾಸಿ ಬಸವರಾಜ್ ಉಲ್ಲತ್ತಿ (53) ಅವರು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇವರು ಶನಿವಾರ ಬೆಳಿಗ್ಗೆ ಕೆ.ಎ-19-ಎಫ್-3548 ನೋಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ರಾಜಹಂಸ ಬಸ್ಸಿನಲ್ಲಿ ಬೆಂಗಳೂರಿನಿಂದ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬರುತ್ತಾ, ಕಡಬ ತಾಲೂಕು, ಶಿರಾಡಿ ಗ್ರಾಮದ, ಗುಂಡ್ಯಾ ಎಂಬಲ್ಲಿಗೆ ತಲುಪುತ್ತಿದ್ದಂತೆ, ವಿರುದ್ದ ದಿಕ್ಕಿನಿಂದ ಕೆ.ಎ-02 ಎ.ಎಚ್3621 ನೋಂದಣಿ ಸಂಖ್ಯೆಯ ಈಚರ್ ಲಾರಿಯನ್ನು ಅದರ ಚಾಲಕ ತಿರುವು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ, ರಾಜಹಂಸ ಬಸ್ಸಿಗೆ ಡಿಕ್ಕಿ ಹೊಡೆದಿರುತ್ತಾನೆ. ಪರಿಣಾಮ ಸದ್ರಿ ರಾಜಹಂಸ ಬಸ್ಸ್ ಚಾಲಕ ನಿಯಂತ್ರಣ ಮೀರಿ ಮಂಗಳೂರಿನಿಂದ ಬರುತ್ತಿದ್ದ ಕೆ.ಎ-57 ಎಫ್-2853 ನೋಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ಸಿಗೆ ಡಿಕ್ಕಿ ಹೊಡೆದಿರುತ್ತದೆ. ಅಪಘಾತದಿಂದ ಮೂರೂ ವಾಹನಗಳ ಚಾಲಕರು ಗಾಯಗೊಂಡಿದ್ದು, ಎರಡು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುವುದಿಲ್ಲ.
ಗಾಯಾಳು ಚಾಲಕರನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment