ಲೊರೆಟ್ಟೊಪದವು : ಕೆ.ಎಸ್.ಆರ್.ಟಿ.ಸಿ. ಬಸ್ಸಿನಿಂದ ಕೆಳಕ್ಕೆ ಬಿದ್ದು ಮಹಿಳೆಗೆ ಗಾಯ - Karavali Times ಲೊರೆಟ್ಟೊಪದವು : ಕೆ.ಎಸ್.ಆರ್.ಟಿ.ಸಿ. ಬಸ್ಸಿನಿಂದ ಕೆಳಕ್ಕೆ ಬಿದ್ದು ಮಹಿಳೆಗೆ ಗಾಯ - Karavali Times

728x90

26 June 2024

ಲೊರೆಟ್ಟೊಪದವು : ಕೆ.ಎಸ್.ಆರ್.ಟಿ.ಸಿ. ಬಸ್ಸಿನಿಂದ ಕೆಳಕ್ಕೆ ಬಿದ್ದು ಮಹಿಳೆಗೆ ಗಾಯ

ಬಂಟ್ವಾಳ, ಜೂನ್ 26, 2024 (ಕರಾವಳಿ ಟೈಮ್ಸ್) : ಕೆ ಎಸ್ ಆರ್ ಟಿ ಸಿ ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಚಾಲಕ ಬಸ್ಸು ಚಲಾಯಿಸಿದ ಪರಿಣಾಮ ಮಹಿಳೆಯೋರ್ವರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಬಿ ಕಸಬಾ ಗ್ರಾಮದ ಲೊರೆಟ್ಟೊಪದವು ಎಂಬಲ್ಲಿ ಮಂಗಳವಾರ ಸಂಭವಿಸಿದೆ. 

ಗಾಯಾಳು ಮಹಿಳೆಯನ್ನು ನರಿಕೊಂಬು ಗ್ರಾಮದ ನಿವಾಸಿ ವಸಂತಿ (49) ಎಂದು ಹೆಸರಿಸಲಾಗಿದೆ. ಇವರು ಸೋಮವಾರ ಬೆಳಿಗ್ಗೆ ಬಿ ಸಿ ರೋಡು-ಮೂಡಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ಲೊರೆಟ್ಟೊಪದವಿನಲ್ಲಿ ಬಸ್ ನಿಲ್ಲಿಸಿ ಬಸ್ಸಿನ ಹಿಂಬಾಗಿಲಿನಿಂದ ಇಳಿಯುತ್ತಿದ್ದ ವೇಳೆ ಚಾಲಕ ಶರಣ ಬಸಪ್ಪ ಅವರು ಏಕಾಏಕಿ ದುಡುಕುತನದಿಂದ ಬಸ್ಸನ್ನು ಚಲಾಯಿಸಿದ ಪರಿಣಾಮ ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳು ವಸಂತಿ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಲೊರೆಟ್ಟೊಪದವು : ಕೆ.ಎಸ್.ಆರ್.ಟಿ.ಸಿ. ಬಸ್ಸಿನಿಂದ ಕೆಳಕ್ಕೆ ಬಿದ್ದು ಮಹಿಳೆಗೆ ಗಾಯ Rating: 5 Reviewed By: karavali Times
Scroll to Top