ಬಂಟ್ವಾಳ : ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಆಸ್ಪತೆಗೆ - Karavali Times ಬಂಟ್ವಾಳ : ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಆಸ್ಪತೆಗೆ - Karavali Times

728x90

21 June 2024

ಬಂಟ್ವಾಳ : ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಆಸ್ಪತೆಗೆ

ಬಂಟ್ವಾಳ, ಜೂನ್ 21, 2024 (ಕರಾವಳಿ ಟೈಮ್ಸ್) : ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡ ಘಟನೆ ಬಿ ಕಸ್ಬಾ ಗ್ರಾಮದ ನೆರೆ ಪರಿಹಾರ ರಸ್ತೆಯ ಕ್ರಾಸ್ ಬಳಿ ಬುಧವಾರ ಸಂಜೆ ಸಂಭವಿಸಿದೆ. 

ಗಾಯಗೊಂಡ ಸ್ಕೂಟರ್ ಸವಾರನನ್ನು ಬಿ ಸಿ ರೋಡು ಸಮೀಪದ ಶಾಂತಿಅಂಗಡಿ ನಿವಾಸಿ ಮಹಮ್ಮದ್ ಇರ್ಶಾದ್ (24) ಎಂದು ಹೆಸರಿಸಲಾಗಿದೆ. ಇವರು ತನ್ನ ಸ್ಕೂಟರಿನಲ್ಲಿ ಕಡೂರು-ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಬಿ ಕಸಬಾ ಗ್ರಾಮದ ನೆರೆ ಪರಿಹಾರ ರಸ್ತೆಯ ಕ್ರಾಸ್ ಬಳಿ ತಲುಪಿದಾಗ ಬಿ ಸಿ ರೋಡು ಕಡೆಯಿಂದ ನಾಸೀರ್ ಎಂಬವರು ಚಲಾಯಿಸಿಕೊಂಡು ಬಂದ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದು ಗಾಯಗೊಂಡ ಸ್ಕೂಟರ್ ಸವಾರ ಇರ್ಶಾದ್ ನನ್ನು ಬಿ ಸಿ ರೋಡು ಸೋಮಯಾಜಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಆಸ್ಪತೆಗೆ Rating: 5 Reviewed By: karavali Times
Scroll to Top