ಬಂಟ್ವಾಳ, ಜೂನ್ 18, 2024 (ಕರಾವಳಿ ಟೈಮ್ಸ್) : ಮನೆ ಮಂದಿ ಇಲ್ಲದ ವೇಳೆ ಒಳಪ್ರವೇಶಿಸಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಅಮರ್ ಪ್ರಿಂಟರ್ಸ್ ರಸ್ತೆಯ ಕಾರಂತಕೋಡಿ ಎಂಬಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಸಿ ಶ್ರೀಧರ (74) ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದ್ದು, ಇವರು ಓಮವಾರ ಸಂಜೆ ಮಗಳ ಮನೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಮನೆಗೆ ವಾಪಾಸು ಬಂದಾಗ ಮನೆಯ ಜಗಲಿಯಲ್ಲಿ ಹಾರೆಯೊಂದು ಕಂಡು ಬಂದಿದೆ. ಮನೆಯ ಬಾಗಿಲಿನ ಬೀಗ ತೆಗೆದು ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಕಪಾಟನಲ್ಲಿಟ್ಟಿದ್ದ ಬಟ್ಟೆ-ಬರೆಗಳು ಚೆಲ್ಲಾಪಿಲ್ಲಿಯಾಗಿದ್ದು, ಅದರಲ್ಲಿದ್ದ 30 ಸಾವಿರ ರೂಪಾಯಿ ನಗದು ಹಣ, 20 ಸಾವಿರ ರೂಪಾಯಿ ಮೌಲ್ಯದ 4 ಗ್ರಾಂ ಚಿನ್ನದ ಆಭರಣ ಹಾಗೂ 2 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಶ್ರೀಧರ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment