ಹಠಾತ್ ಹೃದಯಾಘಾತ : ಮಂಗಳೂರು-ಮುಳಿಹಿತ್ಲು ನಿವಾಸಿ ಅಜ್ಮಲ್ ಭಾಜಿ ನಿಧನ - Karavali Times ಹಠಾತ್ ಹೃದಯಾಘಾತ : ಮಂಗಳೂರು-ಮುಳಿಹಿತ್ಲು ನಿವಾಸಿ ಅಜ್ಮಲ್ ಭಾಜಿ ನಿಧನ - Karavali Times

728x90

14 June 2024

ಹಠಾತ್ ಹೃದಯಾಘಾತ : ಮಂಗಳೂರು-ಮುಳಿಹಿತ್ಲು ನಿವಾಸಿ ಅಜ್ಮಲ್ ಭಾಜಿ ನಿಧನ

ಮಂಗಳೂರು, ಜೂನ್ 14, 2024 (ಕರಾವಳಿ ಟೈಮ್ಸ್) : ನಗರದ ಮುಳಿಹಿತ್ಲು ನಿವಾಸಿ ಅಜ್ಮಲ್ ಭಾಜಿ (57) ಅವರು ಹಠಾತ್ ಹೃದಯಾಘಾತದಿಂದ ಗುರುವಾರ ಬೆಳಗ್ಗಿನ ಜಾವ 2.30ಕ್ಕೆ ನಿಧನರಾದರು. ಕುದ್ರೋಳಿ ಹಝ್ರತ್ ಅವರ ಪುತ್ರರಾಗಿರುವ ಇವರು ಗುರುವಾರ ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದರು. ಮಧ್ಯರಾತ್ರಿ ವೇಳೆ ಹಠಾತ್ ಹೃದಯ ಬೇನೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾತ ಬಂಧು-ಬಳಗವನ್ನು ಅಗಲಿದ್ದಾರೆ. ಮೃತದೇಹ ಮಂಗಳೂರಿನ ಮುಳಿಹಿತ್ಲು ಮನೆಯಲ್ಲಿದ್ದು, ಶುಕ್ರವಾರ ಸಂಜೆ ವೇಳೆಗೆ ಬೋಳಾರದ ಮಸೀದಿಯಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

  • Blogger Comments
  • Facebook Comments

0 comments:

Post a Comment

Item Reviewed: ಹಠಾತ್ ಹೃದಯಾಘಾತ : ಮಂಗಳೂರು-ಮುಳಿಹಿತ್ಲು ನಿವಾಸಿ ಅಜ್ಮಲ್ ಭಾಜಿ ನಿಧನ Rating: 5 Reviewed By: karavali Times
Scroll to Top