ಕೋಟೆಕಣಿ : ಸ್ಕೂಟರಿನಿಂದ ಬಿದ್ದು ಸಹಸವಾರ ಆಸ್ಪತ್ರೆಗೆ - Karavali Times ಕೋಟೆಕಣಿ : ಸ್ಕೂಟರಿನಿಂದ ಬಿದ್ದು ಸಹಸವಾರ ಆಸ್ಪತ್ರೆಗೆ - Karavali Times

728x90

27 June 2024

ಕೋಟೆಕಣಿ : ಸ್ಕೂಟರಿನಿಂದ ಬಿದ್ದು ಸಹಸವಾರ ಆಸ್ಪತ್ರೆಗೆ

ಬಂಟ್ವಾಳ, ಜೂನ್ 27, 2024 (ಕರಾವಳಿ ಟೈಮ್ಸ್) : ಸ್ಕೂಟರಿನಿಂದ ಬಿದ್ದು ಸಹಸವಾರ ಗಾಯಗೊಂಡ ಘಟನೆ ಸಜಿಪನಡು ಗ್ರಾಮದ ಕೋಟೆಕಣಿ ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. 

ಗಾಯಾಳು ಸಹಸವಾರನನ್ನು ಬೆಳ್ತಂಗಡಿ ತಾಲೂಕು, ಪಾರೆಂಕಿ ನಿವಾಸಿ ಜಕಾರಿಯಾ (20) ಎಂದು ಹೆಸರಿಸಲಾಗಿದೆ. ಇವರು ತನ್ನ ಸ್ನೇಹಿತ ಅಜೀಝ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರಿನಲ್ಲಿ ಸಹಸವಾರರಾಗಿ ತೆರಳುತ್ತಿದ್ದ ವೇಳೆ ಕೋಟೆಕಣಿ ಬಳಿ ಸ್ಕೂಟರ್ ಸವಾರನ ನಿರ್ಲಕ್ಷ್ಯ ಹಾಗೂ ದುಡುಕುತನದ ಚಾಲನೆಯಿಂದ ಜಕಾರಿಯಾ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೋಟೆಕಣಿ : ಸ್ಕೂಟರಿನಿಂದ ಬಿದ್ದು ಸಹಸವಾರ ಆಸ್ಪತ್ರೆಗೆ Rating: 5 Reviewed By: karavali Times
Scroll to Top