ಬಂಟ್ವಾಳ, ಮೇ 19, 2024 (ಕರಾವಳಿ ಟೈಮ್ಸ್) : ಅಕ್ರಮ ಮರಳು ಸಾಗಾಟ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಟಿಪ್ಪರ್ ಲಾರಿ ಸಹಿತ ಮರಳನ್ನು ವಶಕ್ಕೆ ಪಡೆದುಕೊಂಡ ಘಟನೆ ಬಿ ಸಿ ರೋಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಶನಿವಾರ ರಾತ್ರಿ ನಡೆದಿದೆ.
ಶನಿವಾರ ರಾತ್ರಿ ಬಂಟ್ವಾಳ ನಗರ ಠಾಣಾ ಎಎಸ್ಸೈ ಬಶೀರ್ ಅವರ ನೇತೃತ್ವದ ಪೊಲೀಸರು ಬಿ ಸಿ ರೋಡು ಮುಖ್ಯ ವೃತ್ತದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸದ್ರಿ ಮಾರ್ಗವಾಗಿ ಬಂದ ಕೆಎ19 ಎಬಿ1850 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯನ್ನು ತಪಾಸಣೆಗಾಗಿ ತಡೆದು ನಿಲ್ಲಿಸಿದ ವೇಳೆ ಈ ಅಕ್ರಮ ಮರಳು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಸದ್ರಿ ಲಾರಿಯನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 3 ಯೂನಿಟ್ ಮರಳು ಲೋಡ್ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಲಾರಿ ಚಾಲಕ, ಬೋಳಂತೂರು ನಿವಾಸಿ ಮೊಹಮ್ಮದ್ ಮನ್ಸೂರು (26) ಎಂಬಾತನಲ್ಲಿ ವಿಚಾರಿಸಿದಾಗ, ಮರಳನ್ನು ವಳಚ್ಚಿಲ್ ಎಂಬಲ್ಲಿನ ನೇತ್ರಾವತಿ ನದಿಯಿಂದ ಯಾವುದೇ ಅನುಮತಿಯಿಲ್ಲದೆ ಅಕ್ರಮವಾಗಿ, ತೆಗೆದು ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾನೆ.
ಮರಳು ಸಹಿತ ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿ ಚಾಲಕ ಮನ್ಸೂರ್ ಹಾಗೂ ಮಾಲಿಕ ಬಿ ಸಿ ರೋಡು-ಕೈಕಂಬ ನಿವಾಸಿ ಅಶ್ರಫ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment