ಕರ್ನಾಟಕ ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟ : ಶೇ 73.40 ಮಂದಿ ಪಾಸ್, ಉಡುಪಿ ಫಸ್ಟ್, ದ.ಕ. ಸೆಕೆಂಡ್, ಯಾದಗಿರಿ ಲಾಸ್ಟ್, ಈ ಬಾರಿಯೂ ಬಾಲಕಿಯರೇ ಮೇಲುಗೈ, ಈ ಬಾರಿ ಶೇ 10ರಷ್ಟು ಫಲಿತಾಂಶ ಕುಸಿತ, ಪಾಸಾದರೂ, ಫೇಲಾದರೂ ಪರೀಕ್ಷೆ 2 ಹಾಗೂ 3ಕ್ಕೆ ಅವಕಾಶ - Karavali Times ಕರ್ನಾಟಕ ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟ : ಶೇ 73.40 ಮಂದಿ ಪಾಸ್, ಉಡುಪಿ ಫಸ್ಟ್, ದ.ಕ. ಸೆಕೆಂಡ್, ಯಾದಗಿರಿ ಲಾಸ್ಟ್, ಈ ಬಾರಿಯೂ ಬಾಲಕಿಯರೇ ಮೇಲುಗೈ, ಈ ಬಾರಿ ಶೇ 10ರಷ್ಟು ಫಲಿತಾಂಶ ಕುಸಿತ, ಪಾಸಾದರೂ, ಫೇಲಾದರೂ ಪರೀಕ್ಷೆ 2 ಹಾಗೂ 3ಕ್ಕೆ ಅವಕಾಶ - Karavali Times

728x90

8 May 2024

ಕರ್ನಾಟಕ ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟ : ಶೇ 73.40 ಮಂದಿ ಪಾಸ್, ಉಡುಪಿ ಫಸ್ಟ್, ದ.ಕ. ಸೆಕೆಂಡ್, ಯಾದಗಿರಿ ಲಾಸ್ಟ್, ಈ ಬಾರಿಯೂ ಬಾಲಕಿಯರೇ ಮೇಲುಗೈ, ಈ ಬಾರಿ ಶೇ 10ರಷ್ಟು ಫಲಿತಾಂಶ ಕುಸಿತ, ಪಾಸಾದರೂ, ಫೇಲಾದರೂ ಪರೀಕ್ಷೆ 2 ಹಾಗೂ 3ಕ್ಕೆ ಅವಕಾಶ

ಬೆಂಗಳೂರು, ಮೇ 09, 2024 (ಕರಾವಳಿ ಟೈಮ್ಸ್) : ರಾಜ್ಯದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, 73.40 ಶೇಕಡಾ ಫಲಿತಾಂಶ ದಾಖಲಾಗಿದೆ. ಶೇ 94 ಫಲಿತಾಂಶ ದಾಖಲಿಸಿರುವ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, 92.12 ಫಲಿತಾಂಶ ದಾಖಲಿಸಿರುವ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ. 88.67 ಶೇಕಡಾ ಫಲಿತಾಂಶ ಪಡೆದಿರುವ ಶಿವಮೊಗ್ಗ ಜಿಲ್ಲೆ ತೃತೀಯ ಸ್ಥಾನದಲ್ಲಿದೆ. 50.59 ಶೇಕಡಾ ಫಲಿತಾಂಶ ಪಡೆದ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಲಭಿಸಿದೆ. 625 ಪೂರ್ಣ ಅಂಕ ಪಡೆದಿರುವ ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಟಾಪರ್ ಆಗಿ ಮೂಡಿ ಬಂದಿದ್ದಾರೆ. 

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಇವರ ಜೊತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಉಪಸ್ಥಿತರಿದ್ದರು.

ಈ ಬಾರಿ ರಾಜ್ಯದಲ್ಲಿ 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 73.40 ಶೇಕಡಾ ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ. 10 ಫಲಿತಾಂಶದಲ್ಲಿ ಕುಸಿತ ಕಂಡು ಬಂದಿದೆ ಎನ್ನಲಾಗುತ್ತಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 3,43,788 ಮಂದಿ ಉತ್ತೀರ್ಣರಾಗಿರುವ ಬಾಲಕಿಯರು ಶೇ 81.11 ಫಲಿತಾಂಶ ದಾಖಲಿಸಿ ಬಾಲಕರಿಗಿಂತ ಮುಂದಿದ್ದಾರೆ. 2,87,416 ಮಂದಿ ಉತ್ತೀರ್ಣಗೊಂಡಿರುವ ಬಾಲಕರು 65.90 ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ. 

ರಾಜ್ಯಾದ್ಯಂತ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ ವತಿಯಿಂದ ಮಾರ್ಚ್ 25 ರಿಂದ ಎಪ್ರಿಲ್ 6ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು. 

ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. ಕರ್ನಾಟಕದಲ್ಲಿ ಈ ಸಲ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 4.41 ಲಕ್ಷ ಬಾಲಕರು, 4.28 ಬಾಲಕಿಯರು. ಅಲ್ಲದೆ, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು.

ಪಾಸಾದರೂ ಫೇಲಾದರೂ ಪರೀಕ್ಷೆ-2, ಪರೀಕ್ಷೆ-3ಕ್ಕೆ ಅವಕಾಶ

ವಿದ್ಯಾರ್ಥಿಗಳು ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.

  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕ ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟ : ಶೇ 73.40 ಮಂದಿ ಪಾಸ್, ಉಡುಪಿ ಫಸ್ಟ್, ದ.ಕ. ಸೆಕೆಂಡ್, ಯಾದಗಿರಿ ಲಾಸ್ಟ್, ಈ ಬಾರಿಯೂ ಬಾಲಕಿಯರೇ ಮೇಲುಗೈ, ಈ ಬಾರಿ ಶೇ 10ರಷ್ಟು ಫಲಿತಾಂಶ ಕುಸಿತ, ಪಾಸಾದರೂ, ಫೇಲಾದರೂ ಪರೀಕ್ಷೆ 2 ಹಾಗೂ 3ಕ್ಕೆ ಅವಕಾಶ Rating: 5 Reviewed By: karavali Times
Scroll to Top