ಬಂಟ್ವಾಳ, ಮೇ 07, 2024 (ಕರಾವಳಿ ಟೈಮ್ಸ್) : ತುಂಬೆ ಗ್ರಾಮದ ವಳವೂರು ಸಮೀಪದ ಬಂಟವಾಳ ಬಂಟರ ಭವನದ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವರ ರಕ್ತಸಿಕ್ತ ಮೃತದೇಹ ಮಂಗಳವಾರ ಬೆಳಿಗ್ಗೆ ಕಂಡು ಬಂದಿದೆ.
ಮೃತ ವ್ಯಕ್ತಿಯನ್ನು ಪುತ್ತೂರು ತಾಲೂಕು, ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು-ಎಂಜಿರಡ್ಕ ನಿವಾಸಿ ಸಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಸಂತೋಷ್ ಮೃತದೇಹವು ಸಭಾಂಗಣದ ಕಂಪೌಂಡ್ ಒಳಗಡೆ ರಕ್ತಸಿಕ್ತವಾಗಿ ಕಂಡು ಬಂದಿದೆ. ಸಭಾಂಗಣದ ಹೊರಗಡೆ ಈತನ ಸ್ಕೂಟರ್ ಕಂಡು ಬಂದಿದೆ.
ಇವರು ತನ್ನ ಮನೆಯಿಂದ ಸೋಮವಾರ ಸಂಜೆ ಮಂಗಳೂರಿಗೆ ಕೆಲಸಕ್ಕೆ ಸ್ಕೂಟರಿನಲ್ಲಿ ಹೊರಟವರು ತಡ ರಾತ್ರಿ ಮೂತ್ರ ಶಂಕೆಗೆಂದು ಸ್ಕೂಟರನ್ನು ಬಂಟ್ವಾಳ ಬಂಟರ ಭವನದ ಎದುರು ನಿಲ್ಲಿಸಿ ನಡೆದುಕೊಂಡು ಹೋಗುತ್ತಿರುವಾಗ ಕಂಪೌಂಡ್ ಪಕ್ಕದ ಆಳ ಜಾಗಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಎಡವಿ ಬಿದ್ದು ತಲೆಗೆ ತೀವ್ರ ಗಾಯಗೊಂಡು ಮೃತಪಟ್ಟಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಮೃತರ ಬಾವ ಪುತ್ತೂರು ಕಸಬಾ ಗ್ರಾಮದ ಉರ್ಲಾಂಡಿ ನಿವಾಸಿ ಶರಣ ಬಸಪ್ಪ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಯು.ಡಿ.ಆರ್ ಕ್ರಮಾಂಕ 17/2024 ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
0 comments:
Post a Comment