ಬಂಟ್ವಾಳ, ಮೇ 06, 2024 (ಕರಾವಳಿ ಟೈಮ್ಸ್) : ಪ್ರಸಕ್ತ ಸನ್ನಿವೇಶದಲ್ಲಿ ಮದುವೆ ಇನ್ನಿತರ ಕಾರ್ಯಕ್ರಮಗಳ ಹೆಸರಿನಲ್ಲಿ ನಡೆಯುವ ಅನಿಸ್ಲಾಮಿಕತೆ, ಆಡಂಬರ ಹಾಗೂ ದುಂದು ವೆಚ್ಚಗಳಿಗೆ ಸಮುದಾಯ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ ಎಂದು ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ತಾಕೀತು ಮಾಡಿದರು.
ಕುಕ್ಕಾಜೆ-ಕಾಪಿಕಾಡ್ ತಾಜುಲ್ ಉಲಮಾ ಮಸೀದಿಯಲ್ಲಿ ಭಾನುವಾರ ರಾತ್ರಿ ನಡೆದ ವಾರ್ಷಿಕ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಿ ಮಾತನಾಡಿದ ಅವರು, ಅಲ್ಲಾಹನಿಗಾಗಿ ಆರಾಧನೆಗಳನ್ನು ಮಾಡುವ ಮುಂಚೆ ಹೃದಯ ಶುದ್ದೀಕರಿಸಿ ಏಕಾಗ್ರತೆಯನ್ನು ಕಾಪಾಡಿಕೊಂಡು ಬರುವುದು ಅತೀ ಅಗತ್ಯವಾಗಿದ್ದು, ಹಾಗಾದಾಗ ಮಾತ್ರ ನಮ್ಮೆಲ್ಲ ಆರಾಧನೆಗಳು ಸ್ವೀಕಾರಾರ್ಹವಾಗಲಿದೆ ಎಂದರು.
ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್, ಮುಹಮ್ಮದಲಿ ಸಖಾಫಿ ಸುರಿಬೈಲು ಅವರು ಉಪನ್ಯಾಗೈದರು. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ ಬಿ ಉಮ್ಮರ್, ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಎಂ ಇಬ್ರಾಹಿಂ, ಸದಸ್ಯರಾದ ಮೊಹಮ್ಮದ್ ಕೆ, ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಝೀಝ್ ಕಾಪಿಕಾಡ್, ಕಾಪಿಕಾಡ್ ಎಸ್ಸೆಸ್ಸೆಫ್ ಶಾಖಾಧ್ಯಕ್ಷ ಜಲೀಲುದ್ದಿನ್ ಡಿ, ಮಸೀದಿ ಇಮಾಂ ಮುಹಮ್ಮದ್ ಮುಸ್ಲಿಯಾರ್, ಪ್ರಮುಖರಾದ ಬಶೀರ್ ಮುಸ್ಲಿಯಾರ್ ಕುಕ್ಕಾಜೆ, ಶೇಖಬ್ಬ ಮುಸ್ಲಿಯಾರ್, ತೌಸೀಫ್ ಕಾಪಿಕಾಡ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಲಿರುವ ಮೊಹಮ್ಮದ್ ಕಾಪಿಕಾಡ್ ಹಾಗೂ ಉಮ್ಮರ್ ಸಿಂಗಾರಿ ಅವರಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.
0 comments:
Post a Comment