ಬಂಟ್ವಾಳ, ಮೇ 15, 2024 (ಕರಾವಳಿ ಟೈಮ್ಸ್) : ಇಲ್ಲಿನ ವಿದ್ಯಾಗಿರಿಯ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ 2023-24ನೇ ಸಾಲಿನ 10ನೇ ತರಗತಿ ಸಿಬಿಎಸ್‍ಇ ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಶಾಲೆಯಿಂದ ಒಟ್ಟು 40 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದು, ಶಾಲÉಯು ಸತತ 13ನೇ ಬಾರಿಗೆ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ.
ಶಾರ್ವರಿ ಮಯ್ಯ (95.6%), ಅನ್ವಿ ಪೂಂಜಾ (94.4%), ಅಮೃತ್ ನಾಯಕ್ ಬಿ (93.8%), ರೋಹನ್ ಎಸ್ (92.4%), ವೃದ್ಧಿ ಜೆ.ಪಿ (92%), ಧನ್ವಿ ಕೇಶವ (91%), ಅನನ್ಯಾ (90.8%), ಎಸ್ ಹಿರಣ್ಮಯಿ (90.8%), ಭೂಮಿಕ ಎಸ್ ಪೂಜಾರಿ (90.6%), ವೃದ್ಧಿ ಶೆಟ್ಟಿಗಾರ್ (90.6%) ಅಂಕಗಳನ್ನು ಪಡೆದಿರುತ್ತಾರೆ ಎಂದು ಶಾಲಾಡಳಿತ ಪ್ರಕಟಣೆ ತಿಳಿಸಿದೆ.
0 comments:
Post a Comment