ಬಂಟ್ವಾಳ, ಮೇ 25, 2024 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಗುಡ್ಡೆಅಂಗಡಿ ಶಾಖೆ ರೂಪೀಕರಣ ಇತ್ತೀಚೆಗೆ ನಡೆಯಿತು. ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಸಭೆಯ ಅಧ್ಯಕ್ಷತೆ ವಹಿಸಿ, ಕಮಿಟಿ ರಚನೆಗೆ ನೇತೃತ್ವ ನೀಡಿ ನೂತನ ಸಮಿತಿ ಸದಸ್ಯರಿಗೆ ಸದಸ್ವತ್ವ ಕಾರ್ಡ್ ವಿತರಿಸಿದರು. ಹನೀಫ್ ಮುಸ್ಲಿಯಾರ್ ನಂದರಬೆಟ್ಟು ಚುನಾವಣಾ ಕಾರ್ಯ ನಡೆಸಿಕೊಟ್ಟರು, ಎಸ್ಸೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಇಸ್ಹಾಕ್ ಫೇಶನ್ ವ್ಹೇರ್, ಪದಾಧಿಕಾರಿಗಳಾದ ಶಫೀಕ್ ಆಲಡ್ಕ, ಬಶೀರ್ ಇಸ್ಮಾಯಿಲ್ ನಂದಾವರ, ಪ್ರಮುಖರಾದ ಹಾಜಿ ಮುಹಮ್ಮದ್ ನೀಮಾ, ಇಕ್ಬಾಲ್ ಗುಡ್ಡೆಅಂಗಡಿ, ಸವಾದ್ ಗೂಡಿನಬಳಿ, ಅಬ್ದುಲ್ ಹಮೀದ್ ಎ ಐ ಗುಡ್ಡೆಅಂಗಡಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ನೂತನ ಸಮಿತಿಯ ಪ್ರಥಮ ಅಧ್ಯಕ್ಷರಾಗಿ ಮುಹಮ್ಮದ್ ಸಾದಿಕ್ ಅಝಾದ್ ನಗರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಮೆಲ್ಕಾರ್ ಅವರನ್ನು ಆರಿಸಲಾಯಿತು. ಉಳಿದಂತೆ ಗೌರವಾಧ್ಯಕ್ಷರಾಗಿ ಹಾಜಿ ಬಿ ಎ ಮುಹಮ್ಮದ್ ನೀಮಾ, ಉಪಾಧ್ಯಕ್ಷರಾಗಿ ಆರಿಫ್ ಮೊಯಿದಿನಬ್ಬ ಹಾಗೂ ಮಯ್ಯದ್ದಿ ಬೋಗೋಡಿ, ಜೊತೆ ಕಾರ್ಯದರ್ಶಿಗಳಾಗಿ ಅರಾಫತ್ ಎಸ್ ಎಂ ನಗರ, ಸೈಫುದ್ದೀನ್, ವರ್ಕಿಂಗ್ ಕಾರ್ಯದರ್ಶಿಯಾಗಿ ರಫೀಕ್ ಕೊಚ್ಚಿ ಅಝಾದ್ ನಗರ, ಕೋಶಾಧಿಕಾರಿಯಾಗಿ ಅಬ್ದುಲ್ಲ ಜಿ ಎ ಅವರನ್ನು ಆರಿಸಲಾಯಿತು.
ಉಪಸಮಿತಿಗಳಾದ ಇಬಾದ್ ಚೆಯರ್‍ಮೆನ್ ಆಗಿ ಮುಹಮ್ಮದ್ ಹನೀಫ್ ಎಸ್ ಎಂ ನಗರ, ವಿಖಾಯ ಚೆಯರ್ ಮೆನ ಆಗಿ ಸಾಜಿದ್ ಗುಡ್ಡೆಅಂಗಡಿ, ಸ್ವರ್ಗಾಲಯ ಮುಖ್ಯಸ್ಥರಾಗಿ ಮುಝಮ್ಮಿಲ್ ಎಸ್ ಎಂ ನಗರ, ಕ್ಯಾಂಪಸ್ ವಿಂಗ್ ಮುಖ್ಯಸ್ಥರಾಗಿ ಹುಸೈದ್, ಸಹಚಾರಿ ಮುಖ್ಯಸ್ಥರಾಗಿ ಅಬೂಬಕ್ಕರ್ ಮೆಲ್ಕಾರ್, ಎಜ್ಯುಕೇಟರ್ ಆಗಿ ಯಾಕುಬ್ ಮುಷರಫ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಫಾರೂಕ್ ಎ ಎಂ, ಖಾಸಿಂ ಬೋಗೋಡಿ, ಮುಹಮ್ಮದ್ ಶರೀಫ್ ಎ ಎಂ ಅವರನ್ನು ನೇಮಿಸಲಾಯಿತು.
0 comments:
Post a Comment