ಬಂಟ್ವಾಳ, ಮೇ 19, 2024 (ಕರಾವಳಿ ಟೈಮ್ಸ್) : ಶನಿವಾರ ರಾತ್ರಿ ಸುರಿದ ಮಳೆ ಹಾಗೂ ಬೀಸಿದ ಗಾಳಿಗೆ ತಾಲೂಕಿನ ವಿವಿಧೆಡೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ತಾಲೂಕಿನ ತೆಂಕಕಜೆಕಾರ್ ಗ್ರಾಮದ ಕರ್ಲ ನಿವಾಸಿ ರಹಿಮತ್ ಕೋಂ ಯಾಕೂಬ್ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ವಿಟ್ಲ ಹೋಬಳಿ ಅಳಿಕೆ ಗ್ರಾಮದ ಕೋಡಿಜಾಲು ನಿವಾಸಿ ನಾರಾಯಣ ಪಾಠಾಳಿ ಅವರ ಮನೆಗೆ ಸಿಡಿಲು ಬಡಿದು ಸುಮಾರು 40 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ಪುಣಚ ಗ್ರಾಮದ ಆಜೇರು ನಿವಾಸಿ ಶಿವಪ್ಪ ನಾಯ್ಕ ಬಿನ್ ಕೃಷ್ಣ ನಾಯ್ಕ ಅವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.
0 comments:
Post a Comment