ಬಂಟ್ವಾಳ, ಮೇ 28, 2024 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ನಿವಾಸಿ ಹೇಮಾವತಿ ಮತ್ತು ಹರೀಶ್ ದಂಪತಿಗಳ ಪುತ್ರ ಸಾತ್ವಿಕ್ (17) ಎಂಬ ಯುವಕ ಕಿಡ್ನಿ ವೈಫಲ್ಯದ ತೊಂದರೆಯಿಂದ ಅನಿರೀಕ್ಷಿತ ಅನಾರೋಗ್ಯಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದ್ವಿತೀಯ ಪಿಯುಸಿ ವ್ಯಾಸಂಗಕ್ಕೆ ಸಜ್ಜಾಗಬೇಕಿದ್ದ ಹುಡುಗ ಇದೀಗ ಹಠಾತ್ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೀಗ ಸಂಕಷ್ಟದಲ್ಲಿರುವ ಬಾಲಕನಿಗೆ
ತನ್ನ ತಾಯಿಯೇ ಕಿಡ್ನಿ ದಾನ ಮಾಡಲು ಮುಂದಾಗಿದ್ದು, ಶಸ್ತ್ರ ಚಿಕಿತ್ಸೆಗೆ ಸುಮಾರು 10 ಲಕ್ಷಕ್ಕಿಂತಲೂ ಅಧಿಕ ಮೊತ್ತದ ತುರ್ತು ಅಗತ್ಯತೆ ಇದೆ. ಆದರೆ ತೀರಾ ಬಡತನದಲ್ಲಿರುವ ಸಾತ್ವಿಕ್ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವಿಲ್ಲ. ಈತನ ತಂದೆಯೂ ಹೃದಯ ಸಂಬಂಧಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅದರ ಔಷಧಿ ವೆಚ್ಚವನ್ನು ನಿಭಾಯಿಸುವುದೇ ದುಸ್ತರವಾಗಿರುವ ಸನ್ನಿವೇಶದಲ್ಲಿ ಇದೀಗ ಬಾಲಕನ ಚಿಕಿತ್ಸಾ ವೆಚ್ಚ ಜೊತೆಗೆ ದೈನಂದಿನ ಬದುಕಿನ ಬಂಡಿಯನ್ನೂ ಎಳೆಯಬೇಕಾದ ಕಷ್ಟಕರ ಪರಿಸ್ಥಿತಿ ಈ ಕುಟುಂಬಕ್ಕೆ ಬಂದೊದಗಿದೆ.
ಇಡೀ ಕುಟುಂಬದ ಹೊರಲಾರದ ಭಾರವನ್ನು ಹೊರಬೇಕಾಗಿರುವ ಈ ಬಡ ತಾಯಿ ಅನಿವಾರ್ಯವಾಗಿ ಇದೀಗ ಸಮಾಜದ ದಾನಿಗಳು ಹಾಗೂ ಸಹೃದಯಿ ಬಾಂಧವರ ನೆರವು ಯಾಚಿಸಿದ್ದಾರೆ. ಕುಟುಂಬದ ಬ್ಯಾಂಕ್ ವಿವರ ಈ ರೀತಿ ಇದೆ
ಖಾತೆದಾರರ ಹೆಸರು : ಹರೀಶ್, ಬ್ಯಾಂಕ್ ಹೆಸರು : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಶಾಖೆ : ಬಂಟ್ವಾಳ, ಖಾತೆ ಸಂಖ್ಯೆ : 520101070321856, ಐಎಫ್‍ಎಸ್‍ಸಿ ಕೋಡ್ : ಯುಬಿಐಎನ್0902047, ಮೊಬೈಲ್ ಸಂಖ್ಯೆ : 9008357648, 8495922963 ಸಹೃದಯ ದಾನಿಗಳು ಸಂಪರ್ಕಿಸಬಹುದು.
0 comments:
Post a Comment