ಬಂಟ್ವಾಳ, ಮೇ 06, 2024 (ಕರಾವಳಿ ಟೈಮ್ಸ್) : ನೇತ್ರಾವತಿ ನದಿಯಲ್ಲಿ ಇಬ್ಬರು ಬಾಲಕಿಯರು ಮನೆ ಮಂದಿಯ ಎದುರಲ್ಲೇ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಇಲ್ಲಿನ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಮೈಂದಾಳ ಎಂಬಲ್ಲಿ ಭಾನುವಾರ ಸಂಜೆ ವೇಳೆಗೆ ನಡೆದಿದೆ.
ಉಳ್ಳಾಲ ನಿವಾಸಿ ಅನ್ಸಾರ್ ಎಂಬವರ ಪುತ್ರಿ ಅಶ್ರಾ (11) ಹಾಗೂ ಸ್ಥಳೀಯ ನಿವಾಸಿ ಇಲ್ಯಾಸ್ ಎಂಬವರ ಪುತ್ರಿ ಮರಿಯಂ ನಾಶೀಯಾ (14) ಎಂಬವರೇ ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕಿಯರು. ಮೂಲತಃ ನಾವೂರು ನಿವಾಸಿಯೇ ಆಗಿದ್ದು, ಪ್ರಸ್ತುತ ಉಳ್ಳಾಲದಲ್ಲಿ ವಾಸವಾಗಿರುವ ಅನ್ಸಾರ್ ಕುಟುಂಬ ಶಾಲಾ ರಜೆ ಹಿನ್ನಲೆಯಲ್ಲಿ ನಾವೂರು ಗ್ರಾಮದ ಮೈಂದಾಳ ಎಂಬಲ್ಲಿರುವ ಸಂಬಂಧಿಕರ ಮನೆಗೆ ಬಂದವರು ಭಾನುವಾರ ಸಂಜೆ ವೇಳೆಗೆ ಇಲ್ಲಿನ ನೀರಕಟ್ಟೆ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಆಟವಾಡಲು ಇಲ್ಯಾಸ್ ಕುಟುಂದ ಜೊತೆಗೂಡಿ ತೆರಳಿದ್ದರು. ಮನೆ ಮಂದಿ ಕೂಡಾ ಈ ಸಂದರ್ಭ ಅಲ್ಲೇ ಮಕ್ಕಳು ಆಟವಾಡುವುದನ್ನು ನೋಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಹಠಾತ್ ಆಗಿ ಬಾಲಕಿಯರಿಬ್ಬರು ನೀರಿನಲ್ಲಿ ಮುಳುಗಿದ್ದು, ಸ್ಥಳದಲ್ಲಿದ್ದ ಮನೆ ಮಂದಿಯಲ್ಲಿ ಯಾರಿಗೂ ಈಜು ಬಾರದ ಕಾರಣ ಮುಳುಗುತ್ತಿರುವ ಬಾಲಕಿಯರನ್ನು ರಕ್ಷಿಸಲು ಸಾಧ್ಯವಾಗದೆ ಮನೆ ಮಂದಿಯ ಕಣ್ಣೆದುರೆ ಬಾಲಕಿಯರು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
0 comments:
Post a Comment