ಮಾದಕ ವಸ್ತು ಸೇವಿಸಿ ಮಾರಾಟಕ್ಕೆ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯ ದಸ್ತಗಿರಿ ಮಾಡಿದ ಬಂಟ್ವಾಳ ನಗರ ಪೊಲೀಸರು - Karavali Times ಮಾದಕ ವಸ್ತು ಸೇವಿಸಿ ಮಾರಾಟಕ್ಕೆ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯ ದಸ್ತಗಿರಿ ಮಾಡಿದ ಬಂಟ್ವಾಳ ನಗರ ಪೊಲೀಸರು - Karavali Times

728x90

15 May 2024

ಮಾದಕ ವಸ್ತು ಸೇವಿಸಿ ಮಾರಾಟಕ್ಕೆ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯ ದಸ್ತಗಿರಿ ಮಾಡಿದ ಬಂಟ್ವಾಳ ನಗರ ಪೊಲೀಸರು

ಬಂಟ್ವಾಳ, ಮೇ 16, 2024 (ಕರಾವಳಿ ಟೈಮ್ಸ್) : ಸ್ವತಃ ಮಾದಕ ವಸ್ತು ಸೇವಿಸಿ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಮಾದಕ ವಸ್ತು ಸಹಿತ ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಮೂಲತಃ ಸಜಿಪನಡು ಗ್ರಾಮದ ನಿವಾಸಿ, ಪ್ರಸ್ತುತ ಬಂಟ್ವಾಳ-ಲೊರೆಟ್ಟೊಪದವಿನಲ್ಲಿ ವಾಸವಾಗಿರುವ ದಾವುದುಲ್ ಹಕೀಂ (23) ಎಂದು ಹೆಸರಿಸಲಾಗಿದೆ. ಬಿ ಕಸಬಾ ಗ್ರಾಮದ ಕ್ಯಾಶೂ ಫ್ಯಾಕ್ಟರಿ ಬಳಿ ಕೆ ಎ 70 ಎಚ್ 8304 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಆರೋಪಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದಾಗ ಆತನನ್ನು ತಡೆದ ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಆಂಜನೇಯ ರೆಡ್ಡಿ ಅವರ ನೇತೃತ್ವದ ಪೊಲೀಸರು ವಿಚಾರಿಸಿದಾಗ ಆತನ ಮಾದಕ ವಸ್ತು ಸೇವಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿಯ ದ್ವಿಚಕ್ರ ವಾಹನ ಪರಿಶೀಲನೆ ನಡೆಸಿದಾಗ 01.07 ಗ್ರಾಂ ನಿದ್ರಾಜನಕ ಎಂಡಿಎಂಎ ಹಾಗೂ 15.31 ಗ್ರಾಂ ಗಾಂಜಾ ಪತ್ತೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಯಿಂದ ಈ ಅಮಲು ಪದಾರ್ಥಗಳನ್ನು ಖರೀದಿಸಿ ಅದರಲ್ಲಿ ಸ್ವಲ್ಪಾಂಶ ಗಾಂಜಾವನ್ನು ಸೇವಿಸಿ, ಉಳಿದ ಎಂಡಿಎಂಎ ಹಾಗೂ ಗಾಂಜಾವನ್ನು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿ ಬಳಿ ಇದ್ದ ಮಾದಕ ವಸ್ತುಗಳ ಮೌಲ್ಯ ಎರಡೂವರೆ ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಾದಕವಸ್ತುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡಿರುವ ಪೊಲೀಸರು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾದಕ ವಸ್ತು ಸೇವಿಸಿ ಮಾರಾಟಕ್ಕೆ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯ ದಸ್ತಗಿರಿ ಮಾಡಿದ ಬಂಟ್ವಾಳ ನಗರ ಪೊಲೀಸರು Rating: 5 Reviewed By: karavali Times
Scroll to Top