ಬಂಟ್ವಾಳ, ಮೇ 29, 2024 (ಕರಾವಳಿ ಟೈಮ್ಸ್) : ಸ್ಮಾರ್ಟ್ ಗೈಸ್ ಕೈಕಂಬ-ಬಿ ಸಿ ರೋಡು ಹಾಗೂ ಅಂಬೇಡ್ಕರ್ ಯುವ ವೇದಿಕೆ ಬಂಟ್ವಾಳ ಇವುಗಳ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಸಹಭಾಗಿತ್ವದಲ್ಲಿ ಸಮಾಜಮುಖಿ, ಮಾನವತಾವಾದಿ, ಅಂಬೇಡ್ಕರ್ ಚಿಂತಕ, ಉಚಿತ ಸಾಮೂಹಿಕ ವಿವಾಹದ ರೂವಾರಿ ದಿವಂಗತ ರಾಜಾ ಪಲ್ಲಮಜಲು ಇವರ ಅಗಲಿಕೆಯ 3ನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ನುಡಿನಮನ, ಪ್ರತಿಭಾ ಪುರಸ್ಕಾರ ಹಾಗೂ ಹೊನಲು ಬೆಳಕಿನ ಎಸ್ ಜಿ ಕೆ ಟ್ರೋಫಿ-2024 ಮ್ಯಾಟ್ ಕಬಡ್ಡಿ ಪಂದ್ಯಾಟವು ಜೂನ್ 15 ರಂದು ಶನಿವಾರ ಹಾಗೂ 16 ರ ಭಾನುವಾರ ಬಿ ಸಿ ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ.
ಅಂತರ್ ಜಿಲ್ಲಾ ಮಟ್ಟದ ಪುರುಷರ ಮುಕ್ತ 60 ಕೆಜಿ ವಿಭಾಗದ ಪ್ರೊ ಮಾದರಿಯ ಪಂದ್ಯಾಟ ಇದಾಗಿದ್ದು, ವಿಜೇತ ತಂಡಗಳಿಗೆ ಪ್ರಥಮ 10,024/-, ದ್ವಿತೀಯ 8,024/-, ತೃತೀಯ 5,024/- ಹಾಗೂ ಚತುರ್ಥ 3,024/- ರೂಪಾಯಿ ನಗದು ಹಾಗೂ ಟ್ರೋಫಿ ನೀಡಲಾಗುವುದು. ಅಲ್ಲದೆ ವೈಯುಕ್ತಿಕ ಉತ್ತಮ ಪ್ರದರ್ಶನಕ್ಕಾಗಿ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಸವ್ಯಸಾಚಿ ಪ್ರಶಸ್ತಿಗಳನ್ನು ನೀಡಲಾಗುವುದು. ಈ ಬಗ್ಗೆ ಮಾಹಿತಿಗಾಗಿ 7760016137 ಅಥವಾ 8971419047 ನ್ನು ಸಂಪರ್ಕಿಸಬಹುದು ಎಂದು ಸ್ಮಾರ್ಟ್ ಗೈಸ್ ಇದರ ಪ್ರೀತಂರಾಜ್ ಪಲ್ಲಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment