ಬಂಟ್ವಾಳ, ಮೇ 11, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಅಬ್ದುಲ್ ಲತೀಫ್ ಅವರ ಪುತ್ರಿ ನಿಶಾನಾ ಹಾಗೂ ಮಂಗಳೂರು-ಕೋಡಿಕಲ್ ಜೆ ಎಂ ರೋಡ್ ನಿವಾಸಿ ಮರ್‍ಹೂಂ ಅಬ್ದುಲ್ ಕರೀಂ ಅವರ ಪುತ್ರ ಇಮ್ರಾನ್ ಅವರ ವಿವಾಹ ಸಮಾರಂಭವು ಮೇ 11 ರಂದು ಶನಿವಾರ ಗುರುಪುರ-ಗಂಜಿಮಠ ಝರಾ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ನೆರವೇರಿತು.
ಬಶೀರ್ ಫೈಝಿ ಕೋಡಿಕಲ್ ಅವರು ನಿಕಾಹ್ ನೇತೃತ್ವ ವಹಿಸಿದ್ದರು. ಅಕ್ಕರಂಗಡಿ ಮಸೀದಿ ಖತೀಬ್ ಮಜೀದ್ ದಾರಿಮಿ, ಮನಪಾ ಸದಸ್ಯ ಮನೋಜ್, ನರಿಕೊಂಬು ಗ್ರಾ ಪಂ ಸದಸ್ಯ ರಿಯಾಝ್ ನೆಹರುನಗರ, ಪ್ರೆಸ್ಟಿಜ್ ಕಾಲೇಜು ಮಾಲಕ ಹೈದರ್ ಮೊದಲಾದವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದು, ನೂತನ ವಧೂ-ವರರಿಗೆ ಶುಭಾಶಯ ಕೋರಿದರು.
0 comments:
Post a Comment