ಬಂಟ್ವಾಳ, ಮೇ 02, 2024 (ಕರಾವಳಿ ಟೈಮ್ಸ್) : ಕೇಂದ್ರದ ಮೋದಿ ಸರಕಾರವು ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಿ ಮಾಲಕರ ಪರವಾದ ಕಾನೂನು ಜಾರಿ ಮಾಡುವ ಮೂಲಕ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಹೊರಟಿದೆ ಎಂದು ಎಐಸಿಸಿಟಿಯು ರಾಷ್ಟ್ರೀಯ ಅಧ್ಯಕ್ಷ ಕಾಮ್ರೇಡ್ ಶಂಕರ್ ಆರೋಪಿಸಿದರು.
ಎಐಸಿಸಿಟಿಯು ದ ಕ ಜಿಲ್ಲಾ ಸಮಿತಿ ವತಿಯಿಂದ ಬಿ ಸಿ ರೋಡಿನಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕರಾಗಿಯೇ ದುಡಿಸುವುದು ಹಾಗೂ ಪಿ ಎಫ್, ಇ ಎಸ್ ಐ, ಬೋನಸ್, ಗ್ರಾಚ್ಯೂಟಿ ಮೊದಲಾದ ಯಾವುದೇ ಸೌಲಭ್ಯ ನೀಡದೇ ಜೀತದಾಳುಗಳಾಗಿ ದುಡಿಸುವುದು ಕೇಂದ್ರದ ಮೋದಿ ಸರಕಾರದ ಹುನ್ನಾರವಾಗಿದ್ದು ಇದರ ವಿರುದ್ಧ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಎಐಸಿಸಿಟಿಯು ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಮುಖಂಡರುಗಳಾದ ಪ್ರದೀಪ್ ಕುಮಾರ್, ಮಾರ್ಟಿನ್, ವಿನಯ ನಡುಮುಗೇರು, ತುಳಸೀದಾಸ್ ವಿಟ್ಲ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment