ಬಂಟ್ವಾಳ, ಮೇ 22, 2024 (ಕರಾವಳಿ ಟೈಮ್ಸ್) : ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾ ಮಗುಚಿ ಬಿದ್ದು ಚಾಲಕ ಗಾಯಗೊಂಡ ಘಟನೆ ಬಿ ಸಿ ರೋಡು ಸಮೀಪದ ಕೈಕಂಬ ಮೀನು ಮಾರುಕಟ್ಟೆ ಮುಂಭಾಗ ಮಂಗಳವಾರ ಸಂಜೆ ಸಂಭವಿಸಿದೆ.
ಗಾಯಗೊಂಡ ಅಟೋ ರಿಕ್ಷಾ ಚಾಲಕನನ್ನು ಕಾಡಬೆಟ್ಟು ನಿವಾಸಿ ಗಂಗಾಧರ ಪೂಜಾರಿ (51) ಎಂದು ಹೆಸರಿಸಲಾಗಿದೆ. ಇವರು ಕೈಕಂಬದಿಂದ ಬಿ ಸಿ ರೋಡು ಕಡೆಗೆ ಹೆದ್ದಾರಿಯಲ್ಲಿ ಅಟೋ ರಿಕ್ಷಾ ಬಾಡಿಗೆ ನಿಮಿತ್ತ ಬರುತ್ತಿದ್ದಾಗ ಅಬ್ದುಲ್ ರಹಿಮಾನ್ ಎಂಬವರು ಚಲಾಯಿಸುತ್ತಿದ್ದ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಗಾಯಾಳು ಗಂಗಾಧರ ಪೂಜಾರಿ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment