ಬಂಟ್ವಾಳ, ಮೇ 25, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ-ಬೋಗೋಡಿ ನಿವಾಸಿ, ಆಲಡ್ಕ ಇಂಡಿಯನ್ ಕ್ಯಾಟರರ್ಸ್ ಮಾಲಕ ಇಬ್ರಾಹಿಂ ಶೇಖ್ ಬಂಗ್ಲೆಗುಡ್ಡೆ (54) ಅವರು ಹಠಾತ್ ಕಾಣಿಸಿಕೊಂಡ ಹೃದಯಾಘಾತದಿಂದ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮುಂಜಾನೆ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯಲ್ಲಿ ನಿಧರಾದರು.
ಬುಧವಾರ ರಾತ್ರಿ ಹಠಾತ್ ಹೃದಯ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ರಾತ್ರಿಯೇ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ಮುಂಜಾನೆ ವೇಳೆಗೆ ಮೃತಪಟ್ಟರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಮೂಲತಃ ಪಾಣೆಮಂಗಳೂರು ಬಂಗ್ಲೆಗುಡ್ಡೆ ನಿವಾಸಿಯಾಗಿದ್ದ ಇವರು ಬಳಿಕ ಬೋಗೋಡಿಯಲ್ಲಿ ಮನೆ ನಿರ್ಮಿಸಿ ವಾಸವಾಗಿದ್ದರು. ಪ್ರಾರಂಭದಲ್ಲಿ ಗಲ್ಫ್ ಉದ್ಯೋಗಿಯಾಗಿದ್ದ ಇವರು ಬಳಿಕ ಆಲಡ್ಕದಲ್ಲಿ ಇಂಡಿಯನ್ ಕ್ಯಾಟರರ್ಸ್ ಹಾಗೂ ಐಬಿ ಮ್ಯಾನ್ ಪವರ್ ಎಂಬ ಉದ್ಯಮ ಸಂಸ್ಥೆ ನಡೆಸುತ್ತಿದ್ದರು. ಮೃತರು ಪತ್ನಿ, ಮೂರು ಮಂದಿ ಪುತ್ರಿಯರು, ಇಬ್ಬರು ಪುತ್ರರು ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
0 comments:
Post a Comment