ಬಂಟ್ವಾಳ, ಮೇ 02, 2024 (ಕರಾವಳಿ ಟೈಮ್ಸ್) : ಮರಳು ಲೋಡ್ ಮಾಡಿದ ಬಗ್ಗೆ ಕೂಲಿ ಹಣ ಕೇಳಿದ್ದಕ್ಕೆ ಇಬ್ಬರು ಸೇರಿ ಕಾರ್ಮಿಕಗೆ ಜಾತಿ ನಿಂದನೆಗೈದು ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಕೂಲಿ ಕಾರ್ಮಿಕನನ್ನು ನಾವೂರು ನಿವಾಸಿ ಧನಂಜಯ (24) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ನಿಸಾರ್ ಹಾಗೂ ಸುನಿಲ್ ಎಂದು ಹೆಸರಿಸಲಾಗಿದೆ.
ಧನಂಜಯ ಅವರು ಕೂಲಿ ಕಾರ್ಮಿಕನಾಗಿದ್ದು, ಎ 27 ರಂದು ಆರೋಪಿ ನಿಸಾರ್ ಸೂಚಿಸಿದಂತೆ ಮರಳು ಲೋಡು ಕೆಲಸ ಮಾಡಿದ್ದು, ಸದ್ರಿ ಕೆಲಸದ ಬಗ್ಗೆ ನಿಸಾರ್ ಕೂಲಿ ಹಣ ನೀಡದಿದ್ದು, ಈ ಬಗ್ಗೆ ಎ 30 ರಂದು ರಾತ್ರಿ ಕರೆ ಮಾಡಿ ಕೂಲಿ ನಿಸಾರನಲ್ಲಿ ಹಣವನ್ನು ಕೇಳಿರುತ್ತಾರೆ. ಈ ವೇಳೆ ಆರೋಪಿ ಧನಂಜಯ ಅವರನ್ನುದ್ದೇಶಿಸಿ ಅವ್ಯಾಚವಾಗಿ ಬೈದಿರುತ್ತಾನೆ. ಮುಂದುವರಿದಂತೆ ಮೇ 1 ರಂದು ಮದ್ಯಾಹ್ನ ಧನಂಜಯ ಅವರು ನಾವೂರು ಶಾಲೆಯ ಬಳಿ ನಿಂತಿದ್ದಾಗ ಮತ್ತೋರ್ವ ಆರೋಪಿ ಸುನೀಲ್ ಎಂಬಾತ ಬಂದು ಆರೋಪಿತ ನಿಸಾರ್ ಬಳಿ ಕೂಲಿ ಹಣವನ್ನು ಕೇಳಿರುವ ಬಗ್ಗೆ ತಕರಾರು ತೆಗೆದು ಧನಂಜಯ ಅವರಿಗೆ ಹಲ್ಲೆ ನಡೆಸಿ ಹೋಗಿರುತ್ತಾನೆ. ನಂತರ ಸ್ವಲ್ಪ ಸಮಯದ ಬಳಿಕ ಧನಂಜಯ ಅವರು ನಾವೂರು ಆಸ್ಪತ್ರೆಯ ಬಸ್ ತಂಗುದಾಣದ ಬಳಿಯಿದ್ದಾಗ ಆರೋಪಿಗಳಾದ ಸುನೀಲ್ ಹಾಗೂ ನಿಸಾರ್ ಇಬ್ಬರೂ ಬಂದು ಅವ್ಯಾಚವಾಗಿ ಬೈದು, ಜಾತಿ ನಿಂದನೆ ಮಾಡಿರುವುದಲ್ಲದೆ ಜೀವ ಬೆದರಿಕೆ ಒಡ್ಡಿ ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2024 ಕಲಂ 323, 324, 504, 506 ಜೊತೆಗೆ 34 ಐಪಿಸಿ ಮತ್ತು 3(1), 3(2) (5ಎ) ಎಸ್ಸಿ/ಎಸ್ಟಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment