ಮಂಗಳೂರು, ಮೇ 19, 2024 (ಕರಾವಳಿ ಟೈಮ್ಸ್) : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ವತಿಯಿಂದ ಮಂಗಳೂರು-ಬಂದರಿನ ಝೀನತ್ ಭಕ್ಷ್ ಜುಮಾ ಮಸೀದಿಗೆ ಕ್ಯೂ ಆರ್ ಕೋಡ್ ಹೊಂದಿರುವ ಇ-ಹುಂಡಿ ಸೌಲಭ್ಯವನ್ನು ಕೊಡುಗೆಯಾಗಿ ನೀಡಲಾಯಿತು. ಕ್ರಿಸ್ತಶಕ 644 ರಲ್ಲಿ ನಿರ್ಮಿಸಲಾದ ಝೀನತ್ ಭಕ್ಷ್ ಮಸೀದಿಯು ಭಾರತದ 3ನೇ ಅತ್ಯಂತ ಹಳೆಯ ಮಸೀದಿಯಾಗಿದೆ.
ಇ-ಹುಂಡಿಯನ್ನು ಬ್ಯಾಂಕ್ ವಲಯ ಮುಖ್ಯಸ್ಥೆ ಶ್ರೀಮತಿ ರೇಣು ನಾಯರ್ ಅವರು ಮಸೀದಿ ಆಡಳಿತ ಸಮಿತಿ ಮುಹಮ್ಮದ್ ಅಶ್ರಫ್ ಅವರಿಗೆ ಹಸ್ತಾಂತರಿಸಿದರು. ಪ್ರಾದೇಶಿಕ ಮುಖ್ಯಸ್ಥ ರಾಜಮಣಿ, ಉಪ ಪ್ರಾದೇಶಿಕ ಮುಖ್ಯಸ್ಥ ಮೊಹಮ್ಮದ್ ಸಯೀದ್ ಖುರೇಷಿ ಅವರು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment