ಡಿಪ್ಲೊಮಾ ಸಿಇಟಿ-2024 (ಡಿಸಿಇಟಿ) ಆನ್ ಲೈನ್ ಅರ್ಜಿ ಸಲ್ಲಿಕೆಗೆ ಮೇ 23ರವರೆಗೆ ಅವಕಾಶ - Karavali Times ಡಿಪ್ಲೊಮಾ ಸಿಇಟಿ-2024 (ಡಿಸಿಇಟಿ) ಆನ್ ಲೈನ್ ಅರ್ಜಿ ಸಲ್ಲಿಕೆಗೆ ಮೇ 23ರವರೆಗೆ ಅವಕಾಶ - Karavali Times

728x90

18 May 2024

ಡಿಪ್ಲೊಮಾ ಸಿಇಟಿ-2024 (ಡಿಸಿಇಟಿ) ಆನ್ ಲೈನ್ ಅರ್ಜಿ ಸಲ್ಲಿಕೆಗೆ ಮೇ 23ರವರೆಗೆ ಅವಕಾಶ

 ಬೆಂಗಳೂರು, ಮೇ 18, 2024 (ಕರಾವಳಿ ಟೈಮ್ಸ್) : ಪ್ರಸಕ್ತ ಸಾಲಿನಲ್ಲಿ ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ/ ಮೂರನೇ ಸೆಮಿಸ್ಟರ್ ಗೆ ನೇರ ಪ್ರವೇಶ ಪಡೆಯಲಿಚ್ಛಿಸುವ ಅಭ್ಯರ್ಥಿಗಳಿಗೆ ಡಿಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮೇ 20 ರಿಂದ 23 ರವರೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ.

ಅಭ್ಯರ್ಥಿಗಳ ಮನವಿ ಪರಿಗಣಿಸಿ ಈ ಕಾಲಾವಕಾಶ ನೀಡಲಾಗಿದ್ದು, ಇದುವರೆಗೆ ನೋಂದಣಿ ಮಾಡಿಕೊಳ್ಳದಿರುವ ಅರ್ಹ ಡಿಪೆÇ್ಲಮಾ ಅಭ್ಯರ್ಥಿಗಳು ಮೇ 20ರ ಬೆಳಗ್ಗೆ 11 ಗಂಟೆಯಿಂದ 23 ರ ರಾತ್ರಿ 11.59ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ಮೇ 24ರವರೆಗೆ ಅವಕಾಶ ನೀಡಲಾಗಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಡಿಪ್ಲೊಮಾ ಸಿಇಟಿ-2024 (ಡಿಸಿಇಟಿ) ಆನ್ ಲೈನ್ ಅರ್ಜಿ ಸಲ್ಲಿಕೆಗೆ ಮೇ 23ರವರೆಗೆ ಅವಕಾಶ Rating: 5 Reviewed By: karavali Times
Scroll to Top