ಮುಂಬಯಿ, ಮೇ 11, 2024 (ಕರಾವಳಿ ಟೈಮ್ಸ್) : ಲೋಕಸಭಾ ಚುನಾವಣೆ ಪ್ರಯುಕ್ತ ಮುಂಬಯಿ ಕ್ರಿಶ್ಚಿಯನ್ ಡೆವೆಲಪ್ ಮೆಂಟ್ ಎಸೋಸಿಯೇಷನ್ ವತಿಯಿಂದ ‘ಇಂಡಿಯಾ’ ಮೈತ್ರಿಕೂಟದ ಮುಖಂಡರು ಕ್ರೈಸ್ತ ಮುಖಂಡರ ಜೊತೆ ಸಮಾಲೋಚನಾ ಸಭೆ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ರಮ ಮುಂಬಯಿ ಮರಾಠಾ ಮಂದಿರ ಹಿಂಭಾಗದ ವೈಎಂಸಿಎ ಬಾಂಬೇ ಸೆಂಟ್ರಲ್ ಸಭಾಂಗಣದಲ್ಲಿ ಶನಿವಾರ (ಮೇ 11) ನಡೆಯಿತು.
ಕರ್ನಾಟಕ ಸರಕಾರದ ಮಾಜಿ ಸಚಿವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷ ಬಿ ರಮಾನಾಥ ರೈ, ಕ್ರೈಸ್ತ ಮುಖಂಡ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯ ಪಿಯೂಸ್ ಎಲ್ ರೊಡ್ರಿಗಸ್, ಕರ್ನಾಟಕ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಎಂ ಎಲ್ ಸಿ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮುಂಬಯಿ ಎನ್ ಸಿ ಪಿ ನಾಯಕಿ ರಾಕೀ ಜಾಧವ್, ಮುಂಬಯಿ ಎಎಪಿ ನಾಯಕಿ ಪ್ರೀತಿ ಮೆನನ್, ಕ್ರಿಶ್ಚಿಯನ್ ಡೆವಲಪ್ ಮೆಂಟ್ ಎಸೋಸಿಯೇಶನ್ ಅಧ್ಯಕ್ಷ ಪಾಸ್ಟರ್ ದೇವದನ್ ತ್ರಿಭುವನ್, ಕನ್ವೀನರ್ ಜಾನೆಟ್ ಡಿ’ಸೋಜ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment