ಬೆಳ್ತಂಗಡಿ, ಮೇ 14, 2024 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ಮೀರಿದ ಬಸ್ಸೊಂದು ರಸ್ತೆ ಬದಿಯ ಧರೆ, ಮರ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಚಾಲಕ-ನಿರ್ವಾಹಕ ಸೇರಿ 19 ಮಂದಿ ಗಾಯಗೊಂಡ ಘಟನೆ ಮುಂಡಾಜೆ ಗ್ರಾಮದ ಮುಂಡಾಜೆ ಶೀಟ್ ಬಳಿ ಭಾನುವಾರ ರಾತ್ರಿ ನಡೆದಿದೆ.
ಈ ಬಗ್ಗೆ ಬೆಂಗಳೂರು ನಿವಾಸಿ ಯಲ್ಲಪ್ಪ (62) ಅವರು ಪೊಲೀಸರಿಗೆ ದೂರು ನೀಡಿದ್ದು, ತನ್ನ 16 ಜನ ಕುಟುಂಬ ಸದಸ್ಯರುಗಳು ಹಾಗೂ ಸಂಬಂಧಿಕರೊಂದಿಗೆ, ಕೆಎ51 ಎಎ6033 ನೋಂದಣಿ ಸಂಖ್ಯೆಯ ಬಸ್ಸಿನಲ್ಲಿ ಚಾಲಕರಾಗಿ ರಾಕೇಶ್ ಮತ್ತು ಮನೋಜ್ ಎಂಬವರೊಂದಿಗೆ ಬೆಂಗಳೂರಿನಿಂದ ಹೊರಟು, ಮೇ 12 ರಂದು ರಾತ್ರಿ, ಚಾರ್ಮಾಡಿ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಾ, ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಮುಂಡಾಜೆ ಶೀಟ್ ಬಳಿ ತಲುಪುತ್ತಿದ್ದಂತೆ, ಚಾಲಕ ದುಡುಕುತನದಿಂದ ಚಲಾಯಿಸಿ, ರಸ್ತೆಯ ಬಲ ಬದಿಯ ಧರೆಗೆ, ಮರಕ್ಕೆ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಪರಿಣಾಮ ಯಲ್ಲಪ್ಪ, ಬಸ್ ಚಾಲಕ, ನಿರ್ವಾಹಕ ಸೇರಿದಂತೆ, ವಾಹನದಲ್ಲಿದ್ದ 19 ಮಂದಿಗೆ ಗಾಯಗಳಾಗಿರುತ್ತದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಯಲ್ಲಪ್ಪ ಅವರ ಸಂಬಂಧಿಕರಾದ ವೆಂಕಟಸ್ವಮಪ್ಪ, ಬಸ್ ಚಾಲಕರಾದ ರಾಕೇಶ್ ಮತ್ತು ನಿರ್ವಾಹಕ ಮನೋಜ್ ಅವರುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment