ಬಂಟ್ವಾಳ, ಮೇ 02, 2024 (ಕರಾವಳಿ ಟೈಮ್ಸ್) : ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಕಾರು ಜಖಂಗೊಂಡ ಘಟನೆ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ-ಕೊಯಿಪ್ಪಾಡಿ ನಿವಾಸಿ ಹಿತೇಶ್ (40) ಅವರು ಬುಧವಾರ ಮಧ್ಯಾಹ್ನ ತನ್ನ ಆಲ್ಟೋ ಕಾರಿನಲ್ಲಿ ಹೆಂಡತಿ, ಮಾವ, ಅತ್ತೆ ಹಾಗೂ ಹೆಂಡತಿಯ ಅಕ್ಕ ಅವರುಗಳನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಕಡೆಗೋಳಿ ಕಡೆಯಿಂದ, ಬಂಟ್ವಾಳ ಬಡ್ಡಕಟ್ಟೆಯ ಕಡೆಗೆ ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಬಿ ಮೂಡ ಗ್ರಾಮದ ನಾರಾಯಣ ಗುರು ಸರ್ಕಲ್ ಬಳಿ ತಲುಪಿದಾಗ ಮೆಲ್ಕಾರ್ ಕಡೆಯಿಂದ ಬಂಟ್ವಾಳ ಕಡೆಗೆ ಸಂಚರಿಸುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಲಾರಿ ಚಾಲಕ ಸಂತೋಷ್ ರಾಮ್ ಅವರು ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಅಪಘಾತದಿಂದ ಕಾರಿನ ಎದುರಿನ ಬಲ ಬದಿಯ ಭಾಗ ಜಖಂಗೊಂಡಿದ್ದು, ಪ್ರಯಾಣಿಕರು ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment