ಧರ್ಮಸ್ಥಳ, ಮೇ 29, 2024 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಧರ್ಮಸ್ಥಳ ಹಾಗೂ ಒಡಿಲ್ನಾಳ ಅಂಚೆ ವ್ಯಾಪ್ತಿಯ 6 ಅಶಕ್ತರ ಮನೆ ಬಾಗಿಲಿಗೆ ಹೋಗಿ ಆಧಾರ್ ಸೇವೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಆಧಾರ್ ಅಪ್ಡೇಟ್ ಹಾಗು ಸೀಡಿಂಗ್ ಮಾಡದೆ ಇದ್ದ ಕಾರಣ ಸರಕಾರದಿಂದ ಬರುತ್ತಿದ್ದ ಮಾಸಿಕ ವೇತನವು ಸ್ಥಗಿತವಾಗಿದ್ದಂತಹ ವ್ಯಕ್ತಿಗಳ ಬಳಿಗೆ ಅಂಚೆ ಇಲಾಖಾ ಸಿಬ್ಬಂದಿಗಳು ತೆರಳಿ ಈ ಸೇವೆಯನ್ನು ಒದಗಿಸಿದರು. ಪುತ್ತೂರು ಅಂಚೆ ವಿಭಾಗದ ಸಿಬ್ಬಂದಿ ವರ್ಗ ಹಿರಿಯ ಜೀವಗಳ ಹಾಗೂ ಶಾಶ್ವತ ಅಂಗ ವೈಕಲ್ಯದಿಂದ ಬಳಲುತ್ತಿರುವ ಸುಮಾರು ಆರು ಮನೆಗಳಿಗೆ ತೆರಳಿ ತಡರಾತ್ರಿ 9 ಗಂಟೆಯವರೆಗೂ ಈ ಆಧಾರ್ ಅಪ್ಡೇಟ್ ಸೇವೆ ನೀಡಿದೆ. ಅಂಚೆ ವಿಭಾಗದ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಅಶಕ್ತರ ಸೇವೆ ನಡೆಸುವುದಾಗಿ ಅಂಚೆ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment