ಸುಳ್ಯ, ಎಪ್ರಿಲ್ 12, 2024 (ಕರಾವಳಿ ಟೈಮ್ಸ್) : ಸ್ಕೂಟರ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಹಸವಾರ ದಾರುಣವಾಗಿ ಮೃತಪಟ್ಟು ಸವಾರ ಗಾಯಗೊಂಡ ಘಟನೆ ಪೆರುವಾಜೆ ಗ್ರಾಮದ ಬೋರಡ್ಕ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಮೃತ ಸಹಸವಾರನನ್ನು ಮುಹಮ್ಮದ್ ರಾಜೀಕ್ ಹಾಗೂ ಗಾಯಗೊಂಡ ಸವಾರನನ್ನು ಮುಹಮ್ಮದ್ ಮುಸಾಬ್ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಮುಹಮ್ಮದ್ ಮುಸಾಬ್ ಸವಾರನಾಗಿ ಹಾಗೂ ರಾಜೀಕ್ ಸಹಸವಾರನಾಗಿ ಸಂಚರಿಸುತ್ತಿರುವ ವೇಳೆ ಬೋರಡ್ಕ ಎಂಬಲ್ಲಿ ಸ್ಕೂಟರ್ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಸ್ಕೂಟರ್ ರಸ್ತೆಗೆ ಮಗುಚಿ ಬಿದ್ದು ಇಬ್ಬರು ಸವಾರರೂ ಕೂಡಾ ಗಾಯಗೊಂಡಿದ್ದಾರೆ. ತಕ್ಷಣ ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ರಾಜೀಕ್ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಗಾಯಾಳು ಮುಸಾಬ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಸಂಬಂಧಿ ಜಬ್ಬಾರ್ ಕೆ ಎಂಬವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment