ಪುತ್ತೂರು, ಎಪ್ರಿಲ್ 29, 2024 (ಕರಾವಳಿ ಟೈಮ್ಸ್) : ಪುತ್ತೂರಿನಲ್ಲಿ ಗ್ಯಾಸ್ ಡೆಲಿವರಿ ವೃತ್ತಿ ಮಾಡುತ್ತಿದ್ದ ವ್ಯಕ್ತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬನ್ನೂರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಇಲ್ಲಿನ ನಿವಾಸಿ ಸೀತಾರಾಮ ರೈ (55) ಎಂಬವರೇ ಆತ್ಮಹತ್ಯೆಗೆ ಶರಣಾದ ಗ್ಯಾಸ್ ಡೆಲಿವರಿ ಮ್ಯಾನ್. ಈ ಬಗ್ಗೆ ಅವರ ಪತ್ನಿ ಶ್ರೀಮತಿ ಸವಿತಾ ರೈ ಅವರು ಪೊಲೀಸರಿಗೆ ದೂರು ನೀಡಿದ್ದು, ತನ್ನ ಗಂಡ ಸೀತಾರಾಮ ರೈ ಪುತ್ತೂರಿನಲ್ಲಿ ಗ್ಯಾಸ್ ಡೆಲಿವರಿ ಕೆಲಸ ಮಾಡಿಕೊಂಡಿದ್ದು, ಮದ್ಯಪಾನ ಸೇವನೆ ಮಾಡುವ ಅಭ್ಯಾಸ ಹೊಂದಿದ್ದರು. ಭಾನುವಾರ (ಎಪ್ರಿಲ್ 28) ಸಾಯಂಕಾಲ ಮನೆಯಿಂದ ಪೇಟೆಗೆಂದು ಹೋದವರು ವಾಪಸು ರಾತ್ರಿ ವಿಪರೀತ ಮದ್ಯ ಸೇವನೆ ಮಾಡಿ ಮನೆಗೆ ಬಂದಿರುತ್ತಾರೆ. ಮನೆಗೆ ಬಂದವರು ಮಗನೊಂದಿಗೆ ಗಲಾಟೆ ಮಾಡಿ ಬಳಿಕ ಕೋಣೆಗೆ ಮಲಗಲು ಹೋಗಿರುತ್ತಾರೆ. ಕೆಲ ಹೊತ್ತಿನ ಬಳಿಕ ಅವರ ತಾಯಿ ಕೊಠಡಿಯ ಲೈಟ್ ಆಫ್ ಮಾಡಲು ಹೋದಾಗ, ಗಂಡನು ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ನಾನು ಹಾಗೂ ಮಕ್ಕಳು ನೇಣು ಕುಣಿಕೆಯಿಂದ ಬಿಚ್ಚಿ ಚಿಕಿತ್ಸೆಗಾಗಿ ಪುತ್ತೂರು ಆದರ್ಶ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment