ಬಂಟ್ವಾಳ, ಎಪ್ರಿಲ್ 18, 2024 (ಕರಾವಳಿ ಟೈಮ್ಸ್) : ಬೋಳಿಯಾರು ಗ್ರಾಮದ ಅಮ್ಮೆಂಬಳ-ಕಟ್ಟದಬಾಗಿಲು ನಿವಾಸಿ ಕೆ ಬಿ ಯೂಸುಫ್ ಅವರ ಪುತ್ರ ಮುಹಮ್ಮದ್ ನಝೀರ್ ಹುಸೈನ್ ಹಾಗೂ ಬಿ ಸಿ ರೋಡು ಸಮೀಪದ ಶಾಂತಿಅಂಗಡಿ ನಿವಾಸಿ ಎಸ್ ಎಚ್ ಯೂಸುಫ್ ಅವರ ಪುತ್ರಿ ಶಿಯಾನಾ ಶಮ್ರೀನ್ ಅವರ ವಿವಾಹವು ಎಪ್ರಿಲ್ 18 ರಂದು ಗುರುವಾರ ಪಾಣೆಮಂಗಳೂರು ಸಮೀಪದ ಆಲಡ್ಕ ಎಸ್ ಎಸ್ ಆಡಿಟೋರಿಯಂನಲ್ಲಿ ನೆರವೇರಿತು.
ಬಶೀರ್ ಸಖಾಫಿ ಅವರು ನಿಕಾಹ್ ನೇತೃತ್ವ ವಹಿಸಿದ್ದರು. ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ, ಶರೀಫ್ ಸಖಾಫಿ ಸುಬ್ಬಗುಳಿ, ಅಬ್ದುಲ್ ರಹಿಮಾನ್ ಫೈಝಿ, ಡಿ ವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ ಕೆ ಇಂತಿಯಾಝ್, ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ನಿತಿನ್ ಕುತ್ತಾರ್, ಬಂಟ್ವಾಳ ಪುರಸಭಾ ನಿಕಟಪೂರ್ವಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಕಾಂಗ್ರೆಸ್ ಮುಖಂಡ ಝುಬೈರ್ ತಲಮೊಗರು, ಪತ್ರಕರ್ತ ಯು ಮುಸ್ತಫಾ ಆಲಡ್ಕ ಮೊದಲಾದವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದು, ನೂತನ ವಧೂ-ವರರಿಗೆ ಶುಭಾಶಯ ಕೋರಿದರು.
0 comments:
Post a Comment