ಬಂಟ್ವಾಳ, ಎಪ್ರಿಲ್ 20, 2024 (ಕರಾವಳಿ ಟೈಮ್ಸ್) : ಗೆಳೆಯರ ಬಳಗ ಕಜಿಪಿತ್ಲು ಇದರ ವತಿಯಿಂದ ಇತ್ತೀಚೆಗೆ ನಡೆದ ಶ್ರೀ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ನಡೆದ ಶ್ರೀ ಭಗವತೀ ಮಹಾತ್ಮೆ ಯಕ್ಷಗಾನದ ಸಂದರ್ಭ ಹಿರಿಯ ಕಲಾವಿದ ಹಾಗೂ ಬೊಳ್ಳಿ ತೊಟ್ಟಿಲು ಪ್ರಸಂಗದ ಪದ್ಯ ರಚನೆಗಾರರಾದ ಗುಡ್ಡಪ್ಪ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮೇಳದ ಯಜಮಾನ ರಾಜೇಶ್ ಗುಜರನ್, ಸಂಘದ ಸದಸ್ಯರಾದ ವಸಂತ ಬಂಟ್ವಾಳ, ಯತಿನ್ ಕಜಿಪಿತ್ಲು, ವಿಕಾಸ್ ಕಜಿಪಿತ್ಲು, ಈಶಾನ್ ಶೆಟ್ಟಿ ಕಜಿಪಿತ್ಲು, ಅವಿನಾಶ್ ಕಜಿಪಿತ್ಲು, ಮೋಹಿತ್, ಸತೀಶ್, ನಿತಿನ್, ವಿನಿತ್ ಕಜಿಪಿತ್ಲ್, ಯಾದವ ಅಗ್ರಬೈಲು ಉಪಸ್ಥಿತರಿದ್ದರು.
0 comments:
Post a Comment