ಪುತ್ತೂರು, ಎಪ್ರಿಲ್ 19, 2024 (ಕರಾವಳಿ ಟೈಮ್ಸ್) : ಜೀಪೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಮೃತಪಟ್ಟು ಮಕ್ಕಳಿಬ್ಬರು ಗಾಯಗೊಂಡ ಘಟನೆ ಮುಂಡೂರು ಗ್ರಾಮದ ಕಾಳಿಂಗಹಿತ್ಲು ಎಂಬಲ್ಲಿನ ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ.
ಮೃತ ಬೈಕ್ ಸವಾರ ತಂದೆಯನ್ನು ಲೋಕೇಶ್ ಎಂದು ಹೆಸರಿಸಲಾಗಿದ್ದು, ಗಾಯಗೊಂಡ ಅವರ ಮಕ್ಕಳನ್ನು ದೀಪ್ತಿ ಹಾಗೂ ಗಗನ್ ಎಂದು ಹೆಸರಿಸಲಾಗಿದೆ. ಲೋಕೇಶ್ ಅವರು ತನ್ನ ಇಬ್ಬರು ಮಕ್ಕಳನ್ನು ಕುಳ್ಳಿರಿಸಿಕೊಂಡು ಬೈಕಿನಲ್ಲಿ ತೆರಳುತ್ತಿದ್ದಾಗ ಮುಂಡೂರು ಗ್ರಾಮದ ಕಾಳಿಂಗಹಿತ್ಲು ಎಂಬಲ್ಲಿನ ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಿಶೋರ್ ಎಂಬವರು ಚಲಾಯಿಸುತ್ತಿದ್ದ ಜೀಪ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಜೀಪ್ ಬೈಕನ್ನು ಎಳೆದುಕೊಂಡು ಹೋಗಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.
ಅಪಘಾತದಿಂದ ತಂದೆ ಹಾಗೂ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ತಂದೆ ಲೋಕೇಶ್ ಅವರು ಮೃತಪಟ್ಟಿದ್ದಾರೆ. ಗಾಯಾಳು ಮಕ್ಕಳಾದ ದೀಪ್ತಿ ಹಾಗೂ ಗಗನ್ ಅವರನ್ನು ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment