ಬಂಟ್ವಾಳ, ಎಪ್ರಿಲ್ 25, 2024 (ಕರಾವಳಿ ಟೈಮ್ಸ್) : ಸಜಿಪಮೂಡ ಹಾಗೂ ಸಜಿಪಮುನ್ನೂರಿನ ಗ್ರಾಮಸ್ಥರು ಹಣ, ಹೆಂಡ, ಸಾರಾಯಿ, ಮಾಂಸ, ಕೋಳಿ ಬಾಡೂಟಗಳಿಗೆ ಕಿಂಚಿತ್ತೂ ಬೆಲೆ ನೀಡುವುದಿಲ್ಲ ಎಂಬುದಕ್ಕೆ ಕಳೆದೆರಡು ಚುನಾವಣೆಗಳಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಲೀಡ್ ಪಡೆದಿರುವುದೇ ಸಾಕ್ಷಿ ಎಂದು ಬಂಟ್ವಾಳ ಕ್ಷೇತ್ರದ ಚುನಾವಣಾ ಪ್ರಚಾರ ಉಸ್ತುವಾರಿ, ಕೆಪಿಸಿಸಿ ಸದಸ್ಯ, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ವಾಗ್ದಾಳಿ ನಡೆಸಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಜಿಪಮೂಡ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಸಾರ್ವಜ£ಕ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭ ಸಜಿಪಮೂಡ ಹಾಗೂ ಸಜಿಪಮುನ್ನೂರು ಗ್ರಾಮಗಳ ಮತದಾರರ ಮನ ಗೆಲ್ಲಲು ವಿಫಲರಾದ ಕೆಲ ಬಿಜೆಪಿಗರು ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ಹಣ, ಹೆಂಡ, ಸಾರಾಯಿ, ಕೋಳಿ, ಮಾಂಸ ಬಾಡೂಟಗಳನ್ನು ಹಂಚಿ ಮತ ಗಳಿಕೆಗೆ ಪ್ರಯತ್ನ ನಡೆಸಿದರೂ ಈ ಗ್ರಾಮಗಳ ಜನರು ಅದ್ಯಾವುದಕ್ಕೂ ಸೊಪ್ಪಿ ಹಾಕದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೇ ಹೆಚ್ಚಿನ ಪ್ರಮಾಣದಲ್ಲಿ ಮತ £ೀಡಿ ಲೀಡ್ ಗಳಿಸಿಕೊಡುವಲ್ಲ ಸಹಕರಿಸಿದ್ದಾರೆ ಎಂದು ಈ ಭಾಗದಲ್ಲಿ ಮುಂಬಯಿ ಉದ್ಯಮಿಗಳು ಕಳೆದ ಚುನಾವಣೆ ವೇಳೆ ನಡೆಸಿದ ಕೃತ್ಯಗಳಿಗೆ ಹೆಸರು ಪ್ರಸ್ತಾಪಿಸದೆ ಪರೀಕ್ಷವಾಗಿ ಸವಾಲೆಸೆದರು.
ಈ ಬಾರಿಯ ಚುನಾವಣಯಲ್ಲೂ ಕೂಡಾ ಈ ಗ್ರಾಮಗಳ ಸಹಿತ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಸಜ್ಜನ, ವಿದ್ಯಾವಂತ, ಅಜಾತಶ್ರು ವ್ಯಕ್ತಿತ್ವದ ಪದ್ಮರಾಜ್ ಆರ್ ಪೂಜಾರಿ ಅತ್ಯಂತ ಹೆಚ್ಚಿನ ಮುನ್ನಡೆಯನ್ನು ಸಾಧಿಸಲಿದ್ದಾರೆ. ತಾಕತ್ತಿದ್ದರೆ ತಮ್ಮ ಚುನಾವಣಾ ಮುನ್ನಾ ದಿನದ ಬಾಡೂಟ ಕೃತ್ಯವನ್ನು ಮುಂದುವರಿಸಿ ಮತ ಗಳಿಕೆ ಹೆಚಿಸಿ ನೋಡೋಣ ಎಂದು ತೊಡೆ ತಟ್ಟಿದರು.
0 comments:
Post a Comment