ಬಂಟ್ವಾಳ, ಎಪ್ರಿಲ್ 10, 2024 (ಕರಾವಳಿ ಟೈಮ್ಸ್) : ಇಲ್ಲಿನ ಎಸ್ ವಿ ಎಸ್ ಪದವಿಪೂರ್ವ ಕಾಲೇಜು 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 100, ಕಲಾ ವಿಭಾಗದಲ್ಲಿ ಶೇಕಡಾ 100, ವಾಣಿಜ್ಯ ವಿಭಾಗದಲ್ಲಿ ಶೇಕಡಾ 97.05 ಫಲಿತಾಂಶÀದೊಂದಿಗೆ ಕಾಲೇಜು ಶೇಕಡಾ 98.33 ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಕೃತಿಕಾ 574 (95.66%), ನಿಶಾ 560 (93.33%), ಅಮೃತ 545 (90.83%), ಕಾರ್ತಿಕ್ ವೈ 543 (90.5%), ಅನುಜ್ಞಾ ಜೆ ಕುಂದರ್ 525 (87.5%), ವಾಣಿಜ್ಯ ವಿಭಾಗದಲ್ಲಿ ಭುವನೇಶ್ 574 (95.66%), ಸ್ಟೆನಲ್ ಪ್ರೀಮ ರೊಡ್ರೀಗಸ್ 558 (93%), ಮೋಕ್ಷ 557 (92.83%), ಲವೇಶ್ ಕೆ. ನಾಯ್ಕ್ 550 (91.66%), ಕರಿಷ್ಮಾ ಡಿ 546 (91.00%) ಹಾಗೂ ಕಲಾ ವಿಭಾಗದಲ್ಲಿ ಸ್ಪೂರ್ತಿ ಎಂ. 558 (93%) ಮತ್ತು ರುಪರ್ಟ್ ಮನಿಶ್ ಕಾರ್ಡೋಝಾ 515 (85.83%) ಅಂಕಗಳನ್ನು ಪಡೆದಿರುತ್ತಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
0 comments:
Post a Comment