ಬೆಂಗಳೂರು, ಎಪ್ರಿಲ್ 20, 2024 (ಕರಾವಳಿ ಟೈಮ್ಸ್) : ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಹಾಡು ಹಗಲೇ ಕೊಲೆ ನಡೆಸಿರುವ ಘಟನೆಯು ತೀವ್ರ ಖಂಡನೀಯವಾಗಿದ್ದು, ಪ್ರೀತಿ ನಿರಾಕರಣೆಯ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪೆÇೀಲಿಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುತ್ತದೆ. ಈಗಾಗಲೇ ಆರೋಪಿಯ ಬಂಧನವಾಗಿದ್ದು, ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಂಡು ಕೊಲೆಯಾದ ನೇಹಾಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಸರಕಾರ ಮುಂದಾಗಬೇಕೆಂದು ಅಖಿಲ ಭಾರತ ವಿಧ್ಯಾರ್ಥಿ ಸಂಘಟನೆ ಸರಕಾರವನ್ನು ಒತ್ತಾಯಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಮಹಿಳೆಯರ ಮೇಲೆ ನಿರಂತರ ದಾಳಿಗಳಾಗುತ್ತಿದ್ದು, ಪ್ರೀತಿಯ ನಿರಾಕರಣೆಯ ಕಾರಣಕ್ಕೆ ಕೊಲೆಗಳಾಗುತ್ತಿವೆ. ಇತ್ತೀಚೆಗೆ ಉಡುಪಿ, ದಕ್ಷಿಣ ಕನ್ನಡ, ತುಮಕೂರಿನಲ್ಲಿ ಪ್ರೀತಿಯ ನಿರಾಕರಣೆಯ ಕಾರಣಕ್ಕೆ ಮಹಿಳೆಯರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಆರೋಪಿಯು ಮುಸ್ಲಿಂ ಧರ್ಮದವನಾದ ಕಾರಣಕ್ಕೆ ಬಿಜೆಪಿ, ಎಬಿವಿಪಿ ಸಂಘಪರಿವಾರ ಈ ಘಟನೆಯನ್ನು ವೈಭವೀಕರಿಸಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದೆ. ರಾಜ್ಯದ ಹಲವೆಡೆ ತಮ್ಮದೆ ಧರ್ಮದ ವ್ಯಕ್ತಿಗಳಿಂದ ವಿದ್ಯಾರ್ಥಿನಿಯರ, ಮಹಿಳೆಯರ ಕೊಲೆ ನಡೆದಾಗ ಮೌನವಾಗಿದ್ದ ಇವರು ಈಗ ಹುಬ್ಬಳ್ಳಿ ಘಟನೆಯ ನೆಪದಲ್ಲಿ ರಾಜ್ಯಾದಾದ್ಯಂತ ಗಲಭೆ ನಡೆಸಲು ಸಂಚು ರೂಪಿಸುತ್ತಿದ್ದಾರೆ. ಇವರ ವಿರುದ್ಧ ರಾಜ್ಯ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವಿಧ್ಯಾರ್ಥಿ ಸಂಘಟನೆ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಪುರುಷ ಪ್ರಧಾನ ವ್ಯವಸ್ಥೆಯನ್ನು ಸಮರ್ಥಿಸುವ ಹಾಗೂ ಬೆಂಬಲಿಸುವ ಶಕ್ತಿಗಳು ಮುನ್ನಲೆಗೆ ಬಂದು ಮಹಿಳೆಯರ ಮೇಲಿನ ದಾಳಿಯನ್ನು ಸಂಭ್ರಮಿಸುವ ಘಟನೆಗಳು ದೇಶದಾದ್ಯಂತ ನಡೆಯುತ್ತಿದ್ದು ಇಂತಹ ದುರ್ಘಟನೆಗಳು ನಡೆಯಲು ಕಾರಣವಾಗುತ್ತಿವೆ. ವಿದ್ಯಾರ್ಥಿನಿಯರ, ಮಹಿಳೆಯರ ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಜೈಲಿನಿಂದ ಹೊರಬಂದಾಗ ಅವರನ್ನು ಸ್ವಾಗತಿಸಿ ಸಂಭ್ರಮಿಸುವ ಕ್ಷಣಗಳಿಗೆ ನಮ್ಮ ದೇಶ ಸಾಕ್ಷಿಯಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯ ಭಾಗವಾಗಿ ಹೆಣ್ಮಕ್ಕಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಲವ್ ಜಿಹಾದ್ ಮುಂತಾದ ಹೆಸರಿನಲ್ಲಿ ಹೆಣ್ಮಕ್ಕಳ ಹಕ್ಕಿನ ಮೇಲೆ ದಾಳಿಗಳಾಗುತ್ತಿದೆ. ಹೆಣ್ಮಕ್ಕಳ ಮೇಲೆ ಈ ರೀತಿಯ ದಾಳಿಗಳು ಹಾಗೂ ಪುರುಷ ಪ್ರಧಾನ ವ್ಯವಸ್ಥೆಯನ್ನು ಸಮರ್ಥಿಸುವ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ಸಮಿತಿ ರಚನೆ ಆಗಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎ ಐ ಎಸ್ ಎ) ಕರ್ನಾಟಕ ಸಂಚಾಲಕ ಸಮಿತಿ ಆಗ್ರಹಿಸಿದೆ.
0 comments:
Post a Comment