ಮೂಡಬಿದ್ರೆ, ಎಪ್ರಿಲ್ 25, 2024 (ಕರಾವಳಿ ಟೈಮ್ಸ್) : ಮುಂಬಯಿಯ ತುಳು ಕನ್ನಡಿಗ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರ ಮುಖ್ಯಮಂತ್ರಿಯ ಆಪ್ತ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಶರದ್‍ಶ್ಚಂದ್ರ ಪವಾರ್) ಇದರ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಹಾಗೂ ವಾಯುವ್ಯ ಮುಂಬಯಿ ಜಿಲ್ಲಾ ಲೋಕಸಭಾ ಕ್ಷೇತ್ರದ ಚುನಾವಣಾ ಸಂಯೋಜಕ ಚಿತ್ರಾಪು ಲಕ್ಷ್ಮಣ ಸಿ ಪೂಜಾರಿ ಅವರು ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡ್ ಎಂಬಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥಿರ್ü, ನ್ಯಾಯವಾದಿ ಪದ್ಮರಾಜ್ ರಾಮಯ್ಯ ಪೂಜಾರಿ ಅವರ ಪರವಾಗಿ ಮತಯಾಚಿಸಿದರು.
ಈ ಸಂದರ್ಭ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ, ಎನ್‍ಸಿಪಿ ಯುವ ನಾಯಕ, ಬೃಹನ್ಮುಂಬಯಿ ಮಹಾನಗರ ಪಾಲಿಕಾ ಪರಿಮಂಡಳದ 3ಕೆ ಪೂರ್ವ ಸಮಿತಿ ಸದಸ್ಯ ನಿರಂಜನ್ ಲಕ್ಷ್ಮಣ್ ಪೂಜಾರಿ, ಪ್ರಮುಖರಾದ ಸತೀಶ್ ಸುವರ್ಣ, ಕುಮಾರ್ ಆಯುಷ್ ಸುವರ್ಣ ಮೊದಲಾದವರು ಜೊತೆಗೂಡಿದರು.
0 comments:
Post a Comment