ಬಂಟ್ವಾಳ, ಎಪ್ರಿಲ್ 02, 2024 (ಕರಾವಳಿ ಟೈಮ್ಸ್) : ಕಳೆದ ಬುಧವಾರ (ಮಾ 27) ಕೆಲಸ ಮಾಡುತ್ತಿದ್ದ ಕಚೇರಿಯಿಂದಲೇ ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ, ಪೂಂಜಾಲಕಟ್ಟೆ ಸಮೀಪದ ಕೊಲ್ಪದಬೈಲು ನಿವಾಸಿ ಲಕ್ಷ್ಮಿನಾರಾಯಣ ಕೆ (52) ಅವರ ಮೃತದೇಹ ಭಾನುವಾರ (ಮಾರ್ಚ್ 31) ಸಂಜೆ ಧರ್ಮಸ್ಥಳ ಪೆÇಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿನ ನದಿಯಲ್ಲಿ ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ಇವರ ಬೈಕ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿತ್ತು. ಬಳಿಕ ಇಲಾಖಾಧಿಕಾರಿಗಳು ಹಾಗೂ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಮಾರ್ಚ್ 30 ರಂದು ಪೆÇಲೀಸರು ಪಟ್ರಮೆ ಆಸುಪಾಸಿನಲ್ಲಿ ಅವರ ಮೊಬೈಲ್ ಸಿಗ್ನಲ್ ಪತ್ತೆಹಚ್ಚಿದರು. ಇದರಿಂದ ಅನುಮಾನಗೊಂಡು ಅದೇ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಭಾನುವಾರ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಮೇಲಕ್ಕೆತ್ತಲಾಗಿದೆ.
ಬುಧವಾರ ಬೆಳಿಗ್ಗೆ ಮನೆಯಿಂದ ಕಚೇರಿಗೆಂದು ಪತ್ನಿ ಬಳಿ ಹೇಳಿ ತೆರಳಿದ್ದ ಇವರು ಸಂಜೆಯಾದರೂ ಮನೆಗೆ ವಾಪಾಸು ಬಂದಿಲ್ಲ. ಈ ಬಗ್ಗೆ ಮನೆ ಮಂದಿ ಕಚೇರಿಯಲ್ಲಿ ವಿಚಾರಿಸಿದಾಗ ಮಧ್ಯಾಹ್ನದವರೆಗೆ ಕರ್ತವ್ಯ £ರ್ವಹಿಸಿ ಮನೆಗೆ ಹೋಗುತ್ತೇನೆಂದು ತೆರಳಿದ್ದಾರೆ ಎಂದು ಹೇಳಿದ್ದರು.
ಆದರೆ ಲಕ್ಮೀನಾರಾಯಣ ಅವರು ಮನೆಗೆ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಮಡಂತ್ಯಾರು ಸಮೀಪದ ಮಾಲಾಡಿ-ವಿದ್ಯಾನಗರ ನಿವಾಸಿ ಕೆ ರಮೇಶ್ ಅವರು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಲಕ್ಷ್ಮಿನಾರಾಯಣ ಅವರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯದ ತಂಡದಲ್ಲೂ ಕಾರ್ಯನಿರ್ವಹಿಸುತ್ತಿದ್ದರು. ಇವರ ನಾಪತ್ತೆ ಬಗ್ಗೆ ತಾಲೂಕು ತಹಶೀಲ್ದಾರ್ ಅವರ ನೇತೃತ್ವದ ನೌಕರರು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೂ ದೂರು ನೀಡಿದ್ದರು. ಈ ಹಿಂದೆಯೂ ಇವರು ಇದೇ ರೀತಿ ನಾಪತ್ತೆಯಾಗಿದ್ದರು ಬಳಿಕ ಪತ್ತೆಯಾಗಿದ್ದರು ಎನ್ನಲಾಗಿತ್ತು.
0 comments:
Post a Comment