ಬಂಟ್ವಾಳ, ಎಪ್ರಿಲ್ 20, 2024 (ಕರಾವಳಿ ಟೈಮ್ಸ್) : 2023ನೇ ಸಾಲಿನ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಣೆಮಂಗಳೂರು ನಿವಾಸಿ ಡಾ ವಾಮನ್ ನಾಯಕ್ ಅವರು ಸಮುದಾಯ ವಿಭಾಗದಲ್ಲಿ (ಎಂ ಡಿ ಕಮ್ಯುನಿಟಿ ಮೆಡಿಸಿನ್) 4ನೇ ರ್ಯಾಂಕ್ ಪಡೆದು ಸಾಧನೆ ಮೆರೆದಿರುತ್ತಾರೆ.
ದಾವಣಗೆರೆ ಜೆ ಜೆ ಎಂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿರುವ ಇವರನ್ನು ಇತ್ತೀಚಿಗೆ ನಡೆದ ಘಟಿಕೋತ್ಸವದಲ್ಲಿ ಸನ್ಮಾನಿಸಲಾಯಿತು. ಪಾಣೆಮಂಗಳೂರಿನ ಖ್ಯಾತ ವೈದ್ಯ ಡಾ ವಿಶ್ವನಾಥ ನಾಯಕ್ ಅವರ ಪುತ್ರರಾಗಿರುವ ಇವರು ಪ್ರಸ್ತುತ ಮಂಗಳೂರಿನ ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
0 comments:
Post a Comment