ಬಂಟ್ವಾಳ, ಎಪ್ರಿಲ್ 14, 2024 (ಕರಾವಳಿ ಟೈಮ್ಸ್) : ಪ್ರಯಾಣಿಕರನ್ನು ಇಳಿಸಿ ಹೊರಡಲು ಅನುವಾಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಹಿಂಬದಿಯಿಂದ ಬಂದ ಸ್ಕೂಟರ್ ಢಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ತುಂಬೆ ಗ್ರಾಮದ ಕಡೆಗೋಳಿ ಎಂಬಲ್ಲಿ ಸಂಭವಿಸಿದೆ.
ಮಂಗಳೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ತುಂಬೆ ಗ್ರಾಮದ ಕಡೆಗೋಳಿ ಎಂಬಲ್ಲಿ ಪ್ರಯಾಣಿಕರನ್ನು ಇಳಿಸಿ ಹೊರಡಲು ಅನುವಾಗುತ್ತಿದ್ದಂತೆ ಹಿಂದಿನಿಂದ ಬಂದ ಹೆಲ್ಮೆಟ್ ಧರಿಸದೆ ಇದ್ದ ಮೂವರು ಪ್ರಯಾಣಿಕರಿದ್ದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಾಯಾಳು ಯುವಕರನ್ನು ಸ್ಥಳೀಯರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ. ಈ ಬಗ್ಗೆ ಕೆ ಎಸ್ ಅರ್ ಟಿ ಸಿ ಬಸ್ ನಿರ್ವಾಹಕ ಮಂಜುನಾಥ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment