ಮಂಗಳೂರು, ಎಪ್ರಿಲ್ 09, 2024 (ಕರಾವಳಿ ಟೈಮ್ಸ್) : ಕೇರಳ ರಾಜ್ಯದ ಪೆÇನ್ನಾನಿ ಪ್ರದೇಶದಲ್ಲಿ ಶವ್ವಾಲ್ ತಿಂಗಳ ಪ್ರಥಮ ಚಂದ್ರ ದರ್ಶನ ಆಗಿರುವ ಹಿನ್ನಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ಎಪ್ರಿಲ್ 10 ರ ಬುಧವಾರದಂದು ಈದುಲ್ ಫಿತ್ರ್ ಹಬ್ಬ ಆಚರಿಸುವಂತೆ ಖಾಝಿಗಳು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬುಧವಾರ ಈದುಲ್ ಫಿತ್ರ್ ಹಬ್ಬ ಆಚರಣೆಗೆ ಖಾಝಿಗಳಾದ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಲ್‍ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರುಗಳು ತೀರ್ಮಾನಿಸಿದ್ದಾರೆ.
ಪವಿತ್ರ ರಂಝಾನ್ ತಿಂಗಳಿನಲ್ಲಿ 29 ದಿನಗಳ ಕಾಲ ಉಪವಾಸ ವೃತ ಆಚರಿಸಿರುವ ಮುಸ್ಲಿಂ ಬಾಂಧವರು ಬುಧವಾರ ಈದುಲ್ ಫಿತ್ರ್ ಆರ್ಥಾತ್ ಚೆರಿಯೆ ಪೆರ್ನಾಳ್ ಹಬ್ಬವನ್ನು ಆಚರಿಸಲಿದ್ದಾರೆ. ಬುಧವಾರ ಬೆಳಿಗ್ಗೆ ಮಸೀದಿ ಹಾಗೂ ಈದ್ಗಾಗಳಲ್ಲಿ ಸಾಮೂಹಿಕ ಈದುಲ್ ಫಿತ್ರ್ ಪ್ರಾರ್ಥನೆ, ಖುತ್ಬಾ ಹಾಗೂ ಈದ್ ಸಂದೇಶಗಳು ನಡೆಯಲಿದ್ದು, ಬಳಿಕ ಮುಸ್ಲಿಮರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ.
0 comments:
Post a Comment