ಮಂಗಳೂರು, ಎಪ್ರಿಲ್ 13, 2024 (ಕರಾವಳಿ ಟೈಮ್ಸ್) : ರಾಜ್ಯಕ್ಕೆ ನೀಡಬೇಕಾದ ತೆರಿಗೆಯಲ್ಲಿ ವಂಚನೆ, ಜಿ.ಎಸ್.ಟಿ.ಯಲ್ಲಿ ಮೋಸ, ಪ್ರವಾಹ ಮತ್ತು ಬರ ಪರಿಹಾರದ ಸಹಾಯಾನುಧಾನವನ್ನು ನೀಡದೇ ವಂಚನೆ ಮಾಡಿ ಅನ್ಯಾಯ ಮಾಡಿರುವ ಕೇಂದ್ರ ಬಿಜೆಪಿ ಸರಕಾರದ ನಿಲುವು ಖಂಡಿಸಿ ಹಾಗೂ ಪ್ರಧಾನಿ ಮೋದಿ ನಡೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಡಿಸಿಸಿ ಅಧ್ಯಕ್ಷ ಕೆ ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ಶನಿವಾರ ಅಪರಾಹ್ನ ಮಂಗಳೂರಿನ ಮಿನಿವಿಧಾನ ಸೌಧದ ಎದುರು ತುರ್ತು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ನಾಳೆ (ಎಪ್ರಿಲ್ 14) ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಅವರ ಗಮನ ಸೆಳೆಯಲು ಹಾಗೂ ಜನರಿಗೆ ಪ್ರಧಾನಿ ಹಾಗೂ ಬಿಜೆಪಿ ಪಕ್ಷದ ವೈಫಲ್ಯ ಹಾಗೂ ಜನವಿರೋಧಿ ನೀತಿಯನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಈ ತುರ್ತು ಪ್ರತಿಭಟನೆಯನ್ನು ಹಮ್ಮಿಕೊಂಡು ಕೇಂದ್ರ ಸರಕಾರದ ಮಲತಾಯಿ ಧೋರಣೆ ಹಾಗೂ ಜನವಿರೋಧಿ ಕ್ರಮದ ಬಗ್ಗೆ ಖಂಡಿಸಿ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಶಾಸಕ ಐವನ್ ಡಿಸೋಜಾ, ಪಕ್ಷ ಪ್ರಮುಖರಾದ ಕೆ. ಅಶ್ರಫ್, ಅಶ್ರಫ್ ಬಜಾಲ್, ಮಲಾರ್ ಮೋನು, ನೀರಜ್ ಚಂದ್ರಪಾಲ್, ಜೋಕಿಂ ಡಿಸೋಜ, ಡಾ. ಶೇಖರ್ ಪೂಜಾರಿ, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಅಲಿಸ್ಟರ್ ಡಿಕುನ್ಹ, ಸಬಿತಾ ಇಸ್ಕಿತ್, ರಮಾನಂದ ಪೂಜಾರಿ, ಕವಿತ ವಾಸು, ಶಾಂತಲ ಗಟ್ಟಿ, ಝಕರಿಯಾ ಮಲಾರ್, ಡಿ.ಎಂ. ಮುಸ್ತಫ, ಇಮ್ರಾನ್ ಎ.ಆರ್., ಸಲೀಂ ಪಾಂಡೇಶ್ವರ, ಜಯರಾಜ್ ಕೋಟ್ಯಾನ್, ಆಶಿಫ್ ಬೆಂಗ್ರೆ, ಅನ್ಸಾರ್ ಸಾಲ್ಮರ, ಸವಾದ್ ಸುಳ್ಯ, ಸೌಹಾನ್ ಎಸ್.ಕೆ, ಸುಹಾನ್ ಆಳ್ವ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment