ಬಂಟ್ವಾಳ , ಎಪ್ರಿಲ್ 23, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಬೀಡಿ ಮಾಲಕರ ಸಂಘದ ನೂತನ ಕಛೇರಿಯು ಸೋಮವಾರ ಮೆಲ್ಕಾರಿನ ಗೋಲ್ಡನ್ ಸಿಟಿ ಕಾಂಪ್ಲೆಕ್ಸ್ ಸೋಮವಾರ ಉದ್ಘಾಟನೆಗೊಂಡಿದೆ.
ಕಚೇರಿ ಉದ್ಘಾಟಿಸಿದ ದ.ಕ. ಜಿಲ್ಲಾ ಬೀಡಿ ಮಾಲಕರ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಮಾತನಾಡಿ, ಜಿಲ್ಲೆಯ ಎಲ್ಲಾ ಬೀಡಿ ಮಾಲಕರು ಒಗ್ಗಟ್ಟಾಗಿ ನಮ್ಮ ಸಮಸ್ಯೆಯನ್ನು ಬಗೆಹರಿಸಲು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಇದೇ ವೇಳೆ ಕಛೇರಿಗೆ ಸ್ಥಳದಾನ ಮಾಡಿದ ಹಜಾಜ್ ಸಮೂಹ ಸಂಸ್ಥೆಗಳ ಪಾಲುದಾರ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅವರನ್ನು ಅಭಿನಂದಿಸಲಾಯಿತು. ಬೀಡಿ ಕಂಪೆನಿಗಳ ಮಾಲೀಕರುಗಳಾದ ಸಿಂಗಾರಿ ಬೀಡಿಯ ಸುಲೈಮಾನ್ ಹಾಜಿ, ಪ್ರೀತಿ ಬೀಡಿಯ ಪ್ರಶಾಂತ, ಕೆ.ಎಸ್. ಬೀಡಿಯ ಮುಸ್ತಫಾ, ಸುಲ್ತಾನ್ ಬೀಡಿಯ ಮುಹಮ್ಮದ್ ರಫೀಕ್ ಹಾಜಿ, ನೂತನ್ ಬೀಡಿಯ ಗಂಗಾಧರ, ಯುನೈನ್ ಬೀಡಿಯ ಅಹ್ಮದ್ ಖಾನ್, ಜ್ಯೋತಿ ಬೀಡಿಯ ರಾಘವ ಸಪಲ್ಯ, ಅಲಂಕಾರ್ ಬೀಡಿಯ ಯೂಸುಫ್ ಹಾಜಿ, ಎ ಒನ್ ಬೀಡಿಯ ಬಿ ಎಸ್ ಮುಹಮ್ಮದ್, ಶ್ರೀ ದೇವಿ ಬೀಡಿಯ ನಾರಾಯಣ, ನ್ಯೂ ರಾಣಿ ಬೀಡಿಯ ರಿಯಾಝ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಗೋಳ್ತಮಜಲು ಸ್ವಾಗತಿಸಿ, ಕೋಶಾಧಿಕಾರಿ ಹಾಜಿ ಪಿ ಎಸ್ ಅಬ್ದುಲ್ ಹಮೀದ್ ವಂದಿಸಿದರು.
0 comments:
Post a Comment