ಉಪ್ಪಿನಂಗಡಿ, ಎಪ್ರಿಲ್ 12, 2024 (ಕರಾವಳಿ ಟೈಮ್ಸ್) : ತಂಗಿ ಜೊತೆ ಫೋನ್ ಕರೆ ಮಾಡಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ತಂಡ ಕಟ್ಟಿಕೊಂಡು ಬಂದ ಆರೋಪಿ ತಲವಾರು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಿಳಿಯೂರು ಗ್ರಾಮ ಕರ್ವೆಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಬಿಳಿಯೂರು ಗ್ರಾಮದ ನಿವಾಸಿ ಅಬ್ದುಲ್ ಹಕೀಂ ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಬಾನೊಟ್ಟು ನಿವಾಸಿ ಇಸಾಕ್, ಆಶಿಕ್ ಹಾಗೂ ಇತರ ಇಬ್ಬರು ಎಂದು ಹೆಸರಿಸಲಾಗಿದೆ. ಆರೋಪಿ ಇಸಾಕ್ ಎಂಬಾತ ಆತನ ತಂಗಿಯೊಂದಿಗೆ ಹಕೀಂ ಫೆÇೀನ್ ಕರೆಮಾಡಿ ಮಾತನಾಡಿದ ವಿಚಾರದಲ್ಲಿ ತಕರಾರು ತೆಗೆದು, ಕರೆಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೇ, ಶುಕ್ರವಾರ ಬೆಳಗ್ಗೆ, ಹಕೀಂ ಬಿಳಿಯೂರು ಗ್ರಾಮದ ಕರ್ವೇಲುವಿನಲ್ಲಿರುವಾಗ ಆರೋಪಿ ಇಸಾಕ್ ಮತ್ತು ಇತರ 3 ಜನರು ಕಾರಿನಲ್ಲಿ ಬಂದು ಹಕೀಂಗೆ ಗುದ್ದಿ ಕೆಳಗೆ ಬೀಳಿಸಿ ಬಳಿಕ ಹಲ್ಲೆ ನಡೆಸಿರುತ್ತಾರೆ. ಆರೋಪಿ ಇಸಾಕ್ ತಲವಾರಿ£ಂದ ಹಲ್ಲೆ ನಡೆಸಿದ್ದು, ಆಶಿಕ್ ಎಂಬಾತ ಆತನ ಕೈಯಲ್ಲಿದ್ದ ಚಾಕುವಿನಿಂದ ತಿವಿದಿದ್ದಾನೆ. ಇತರ ಇಬ್ಬರು ಅರೋಪಿಗಳೂ ಹಲ್ಲೆ ನಡೆಸಿ ಕಾರಿನಲ್ಲಿ ಹೋಗಿರುತ್ತಾರೆ. ಆರೋಪಿತರ ಹಲ್ಲೆಯಿಂದ ಹಕೀಂ ಗಾಯಗೊಂಡಿದ್ದು, ಸದ್ರಿ ಹಲ್ಲೆಗೆ ಆರೋಪಿ ಅಶ್ರಫ್ ಎಂಬಾತನ ಕುಮ್ಮಕ್ಕಿನಿಂದ ಇಸಾಕ್, ಆಶಿಕ್ ಮತ್ತು ಇತರ ಇಬ್ಬರು ಕೊಲೆ ಮಾಡುವ ಉದ್ಧೇಶದಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2024 ಕಲಂ 504, 323, 324, 307, 109 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment