ಕಡಬ, ಎಪ್ರಿಲ್ 12, 2024 (ಕರಾವಳಿ ಟೈಮ್ಸ್) : ಮಹಿಳೆಯ ಜಮೀನಿಗೆ ಅಕ್ರಮ ಪ್ರವೇಶಗೈದು ತಂತಿಬೇಲಿ ಹಾಗೂ ತಡೆಗೋಡೆ ದ್ವಂಸಗೈದ ಘಟನೆ ದೇವರಹಳ್ಳಿ ಏನೇಕಲ್ಲು ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಈ ಬಗ್ಗೆ ಏನೆಕಲ್ಲು ಗ್ರಾಮದ ನಿವಾಸಿ ಶ್ರೀಮತಿ ರಜನಿ (37) ಅವರು ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದು, ಇವರ ಏನೆಕಲ್ಲು ಗ್ರಾಮದಲ್ಲಿರುವ ಜಮೀನಿಗೆ ಗುರುವಾರ ಸಂಜೆ ಆರೋಪಿಗಳಾದ ರಾಮಣ್ಣ ಗೌಡ ಹಾಗೂ ಯದುಚಂದ್ರ ಎಂಬವರು ಅಕ್ರಮ ಪ್ರವೇಶಗೈದು, ಸದ್ರಿ ಜಾಗದಲ್ಲಿ ಇದ್ದ ತಂತಿಬೇಲಿ ಹಾಗೂ ತಡೆಗೊಡೆಗಳನ್ನು ಜೆಸಿಬಿ ಯಂತ್ರದ ಮೂಲಕ ಬಲಾತ್ಕಾರವಾಗಿ ಧ್ವಂಸಗೊಳಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2024 ಕಲಂ 447, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
0 comments:
Post a Comment