ಬಂಟ್ವಾಳ, ಎಪ್ರಿಲ್ 27, 2024 (ಕರಾವಳಿ ಟೈಮ್ಸ್) : ಹಳೆಯ ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಗೆ ಕೋಳಿ ಬಾಳಿನಿಂದ ಇರಿದ ಘಟನೆ ಪುದು ಗ್ರಾಮದ ಕುಮ್ಡೇಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಇರಿತದಿಂದ ಗಾಯಗೊಂಡ ವ್ಯಕ್ತಿಯನ್ನು ಪವನ್ (31) ಎಂದು ಹೆಸರಿಸಲಾಗಿದ್ದು, ಚೂರಿಯಿಂದ ಇರಿತ ನಡೆಸಿದ ಆರೋಪಿಯನ್ನು ಚರಣ್ ಎಂದು ಗುರುತಿಸಲಾಗಿದೆ.
ಪವನ್ ಅವರು ಶುಕ್ರವಾರ ಬೆಳಿಗ್ಗೆ ತನ್ನ ಗೆಳೆಯರೊಂದಿಗೆ ಕುಮ್ಡೇಲು ತಿಮ್ಮಣ್ಣ ಎಂಬವರ ಮನೆಯ ಬಳಿ ನಿಂತಿದ್ದ ವೇಳೆ ಸ್ಥಳಕ್ಕೆ ಬಂದ ಆರೋಪಿ ಚರಣ್ ಎಂಬಾತ ಹಳೆಯ ದ್ವೇಷದ ಹಿನ್ನೆಲೆಯಲ್ಲಿ, ಆತನ ಕೈಯಲ್ಲಿದ್ದ ಕೋಳಿಯ ಕಾಲಿಗೆ ಕಟ್ಟುವ ಬಾಳ್ (ಚೂರಿ) ನಿಂದ ಪವನಿನ ಕುತ್ತಿಗೆಗೆ ಇರಿಯಲು ಯತ್ನಿಸಿರುತ್ತಾನೆ. ಆಗ ಪವನ್ ತಡೆದಿದ್ದು, ಬಳಿಕ ಎದೆಯ ಕೆಳ ಬಾಗಕ್ಕೆ ಚೂರಿಯಿಂದ ಚುಚ್ಚಿ ಓಡಿ ಹೋಗಿರುತ್ತಾನೆ.
ಹಲ್ಲೆಯಿಂದ ಎದೆಯ ಭಾಗಕ್ಕೆ ಗಾಯಗೊಂಡಿರುವ ಪವನ್ ನನ್ನು ತಕ್ಷಣ ಸ್ಥಳದಲ್ಲಿದ್ದ ಗೆಳೆಯರು ಉಪಚರಿಸಿ ಚಿಕಿತ್ಸೆಗಾಗಿ ಅತ್ತಾವರ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 53/2024 ಕಲಂ 307 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment