ಬಂಟ್ವಾಳ, ಎಪ್ರಿಲ್ 25, 2024 (ಕರಾವಳಿ ಟೈಮ್ಸ್) : ಕಾಂಗ್ರೆಸ್ಸಿ£ಂದ ಬಿಜೆಪಿಗೆ ಪಕ್ಷಾಂತರಗೊಂಡ ಬಳಿಕ ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಮಧ್ಯೆ ಹುಳಿ ಹಿಂಡುವ ಪ್ರಯತ್ನ ಮಾಡಿದ್ದ ಹರಿಕೃಷ್ಣ ಬಂಟ್ವಾಳ ಅವರ ಮಾತಿನ ರಂಪಾಟಕ್ಕೆ ಇದೀಗ ಕಾಂಗ್ರೆಸ್ ಮುಖಂಡ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಬಹಿರಂಗ ಪಂಥಾಹ್ವಾನ £ೀಡಿದ್ದಾರೆ. ಈ ಮೂಲಕ ಬಂಟ್ವಾಳದಲ್ಲಿ ಚುನಾವಣ ಕಣ ಮತ್ತಷ್ಟು ರಂಗೇರಿದೆ.
ಕಳೆದ ಚುನಾವಣೆ ವೇಳೆ ಜನಾರ್ದನ ಪೂಜಾರಿ ಅವರನ್ನು ರಮಾನಾಥ ರೈ ಅವರು ಬೈದಿದ್ದಾರೆ, ಕಣ್ಣೀರು ಸುರಿಸುವಂತೆ ಮಾಡಿದ್ದಾರೆ ಕಾಂಗ್ರೆಸ್ಸಿ£ಂದ ಪಕ್ಷಾಂತರಗೊಂಡಿದ್ದ ಹರಿಕೃಷ್ಣ ಅವರು ಚುನಾವಣಾ ವೇದಿಕೆಯಲ್ಲಿ ಆರೋಪಿಸಿ ಉಗ್ರ ಭಾಷಣ ಮಾಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಚುನಾವಣಾ ಸಮಯದಲ್ಲೇ ಕಾಂಗ್ರೆಸ್ ಮುಖಂಡ ಬೇಬಿ ಕುಂದರ್ ಅವರು ಹರಿಕೃಷ್ಣಗೆ ಸವಾಲೆಸೆದಿದ್ದಾರೆ.
ಪೂಜಾರಿ ಅವರನ್ನು ರೈ ಅವರು ದೂಷಿಸಿರುವ ಬಗ್ಗೆ ಹರಿಕೃಷ್ಣರಲ್ಲಿ ದಾಖಲೆ ಇದ್ದರೆ ವೇದಿಕೆಗೆ ಬಂದು ಬಯಲುಗೊಳಿಸಲಿ. ಇದಕ್ಕಾಗಿಯೇ ವೇದಿಕೆ ಸಿದ್ದಪಡಿಸುತ್ತೇವೆ. ಹರಿಕೃಷ್ಣರು ತಾಕತ್ತಿದ್ದರೆ ಸವಾಲು ಸ್ವೀಕರಿಸಲಿ ಎಂದು ಪಂಥಾಹ್ವಾನ £ೀಡಿದರು.
ಕೊನೆಯ ಬಾರಿ ಜನಾರ್ದನ ಪೂಜಾರಿ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಅವರನ್ನು ಶತಾಯಗತಾಯ ಗೆಲ್ಲಿಸಿಯೇ ಸಿದ್ದ ಎಂದು ಪಣತೊಟ್ಟಿದ್ದ ರಮಾನಾಥ ರೈ ಅವರು ಬರೋಬ್ಬರಿ 1 ಕೋಟಿ ರೂಪಾಯಿಗಳ ಚುನಾವಣಾ £ಧಿ ಸಂಗ್ರಹಿಸಿ £ೀಡಿದ್ದರು. ಅಲ್ಲದೆ ತನ್ನ ಚುನಾವಣೆಯ ಪ್ರತಿ ಸಂದರ್ಭದಲ್ಲೂ ಪೂಜಾರಿ ಅವರು ರೈ ಅವರಿಗೆ ಆಶೀರ್ವಾದವನ್ನೂ ಮಾಡಿದ್ದರು. ಹೀಗಿದ್ದರೂ ಇಬ್ಬರು ನಾಯಕರ ಮಧ್ಯೆ ಹುಳಿ ಹಿಂಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹರಿಕೃಷ್ಣ ಅವರ ಖಯಾಳಿ ಮುಂದುವರಿಸಿದರೆ ತಕ್ಕ ಬೆಲೆ ತೆರುವವರಿದ್ದೀರಿ ಎಂದು ಎಚ್ಚರಿಸಿದರು.
ಕೇಂದ್ರದ ಮೋದಿ ಸರಕಾರ ಗಣರಾಜ್ಯೋತ್ಸವ ಸಂದರ್ಭ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ರದ್ದುಗೊಳಿಸಿದಾಗ ಮುಂದಿನ ಬಾರಿ ಗುರುಗಳ ಟ್ಯಾಬ್ಲೋ ಅಳವಡಿಸುವುದು ಶತಸಿದ್ದ ಎಂದು ಮಾಧ್ಯಮ ಮುಂದೆ ಬೊಬ್ಬಿರಿದಿದ್ದ ಹರಿಕೃಷ್ಣ ಬಳಿಕ ಏನು ಮಾಡಿದಿರಿ ಎಂದು ಪ್ರಶ್ನಿಸಿದರು.
ಬಂಟ್ವಾಳದಲ್ಲಿ ಬಿಲ್ಲವರ ಮುಖಂಡ ಮಧ್ಯೆ ನಡೆಯುತ್ತಿರುವ ವಾಕ್ಸಮರ ಇದೀಗ ಚುನಾವಣಾ ಕುತೂಹಲವಾಗಿ ಮಾರ್ಪಾಟಾಗಿದ್ದು, ಚುನಾವಣಾ ಫಲಿತಾಂಶದ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಜನರದ್ದು.
0 comments:
Post a Comment