ಬಂಟ್ವಾಳ, ಎಪ್ರಿಲ್ 20, 2024 (ಕರಾವಳಿ ಟೈಮ್ಸ್) : ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ಎರಡನೇ ಹಂತದ ತರಬೇತಿ ಕಾರ್ಯಾಗಾರ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆಯಿತು.
5 ಮಂದಿ ಮಾಸ್ಟರ್ ಟ್ರೈನರ್ ಗಳ ಮಾರ್ಗದರ್ಶನದಲ್ಲಿ 25 ಸೆಕ್ಟರ್ ಅಧಿಕಾರಿಗಳು 25 ಕೊಠಡಿಗಳಲ್ಲಿ ಪ್ರಾಜೆಕ್ಟರ್, ಎಲ್ ಇ ಡಿ ಪರದೆಗಳನ್ನು ಉಪಯೋಗಿಸಿ ತರಬೇತಿ ನಡೆಸಿಕೊಟ್ಟರು. 299 ಪಿ ಆರ್ ಒ ಗಳು, 299 ಎ ಪಿ ಆರ್ ಒ ಗಳು ಮತ್ತು 598 ಪಿ ಒ ಗಳು ತರಬೇತಿ ಪಡೆದರು. ಒಂದು ಕೊಠಡಿಯಲ್ಲಿ ಆಂಗ್ಲ ಭಾಷೆಯಲ್ಲಿ ತರಬೇತಿ ನಡೆಸಿಕೊಡಲಾಯಿತು.
ಇ ಡಿ ಸಿ ಗಾಗಿ ಎರಡು ಸೌಲಭ್ಯ ಕೇಂದ್ರಗಳನ್ನು ದೀಪಿಕಾ ಪ್ರೌಢ ಶಾಲೆಯಲ್ಲಿ ತೆರೆಯಲಾಗಿತ್ತು. ಪ್ರಥಮ ಚಿಕಿತ್ಸಾ ವಿಭಾಗ, ಮಾಹಿತಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿತ್ತು. ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮತ್ತು ತರಬೇತಿ ವಿಷಯದ ಜಿಲ್ಲಾ ನೋಡಲ್ ಅಧಿಕಾರಿ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ ಉದಯ ಶೆಟ್ಟಿ, ತಹಶೀಲ್ದಾರ್ ಅರ್ಚನಾ ಭಟ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಝ್, ಚುನಾವಣಾ ಉಪತಹಶೀಲ್ದಾರ್ ನವೀನ್ ಬೆಂಜನಪದವು, ವಿಷಯ ನಿರ್ವಾಹಕ ಮಂಜುನಾಥ ಕೆ ಎಚ್, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
0 comments:
Post a Comment