ಬಂಟ್ವಾಳ, ಎಪ್ರಿಲ್ 14, 2024 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ) ಬಂಟ್ವಾಳ ತಾಲೂಕು ಸಮಿತಿ ಮತ್ತು ಬಂಟ್ವಾಳ ತಾಲೂಕು ಭಾರತರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ) ಇವುಗಳ ಜಂಟಿ ಆಶ್ರಯದಲ್ಲಿ ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಬಿ ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ನಡೆಯಿತು.
ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ಬಂಟ್ವಾಳ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನಾರೋಗ್ಯ ಪೀಡಿತರಿಗೆ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಈ ಸಂದರ್ಭ ಬಂಟ್ವಾಳ ತಾಲೂಕು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಭಂಡಾರಿಬೆಟ್ಟು, ಬಂಟ್ವಾಳ ತಾಲೂಕು ಭಾರತರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಸೆರ್ಕಳ, ಗೌರವಾಧ್ಯಕ್ಷ ಜನಾರ್ದನ ಬೋಳಂತೂರು, ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವ ಸಲಹೆಗಾರ ರಾಜ ಚೆಂಡ್ತಿಮಾರ್, ಸದಸ್ಯರುಗಳಾದ ಕೇಶವ್ ನಾಯ್ಕ್, ಬಾಬು ದೊಂಪದಪಲ್ಕೆ, ವೆಂಕಟೇಶ್ ಕೃಷ್ಣಾಪುರ, ಮೋಹನ್ ಬಡಗಬೆಳ್ಳೂರು, ನಾರಾಯಣ ಬೊಂಡಾಲ, ರತೀಶ್ ಸರಪಾಡಿ, ಜಯಂತಿ ವಾಮದಪದವು, ಜಾನಕಿ ವಾಮದಪದವು, ಶೇಖರ್ ಬೀಯಪಾದೆ, ರವಿ ಬೀಯಪಾದೆ, ಸುರೇಶ್ ಅರ್ಬಿಗುಡ್ಡೆ, ಪ್ರೇಮ್ ರಾಜ್ ಪಲ್ಲಮಜಲು, ಹರೀಶ್ ಭಂಡಾರಿಬೆಟ್ಟು, ಚಂದ್ರಹಾಸ ಅರ್ಬಿಗುಡ್ಡೆ, ಶ್ರೀಮತಿ ವಿಮಲ ಅರ್ಬಿಗುಡ್ಡೆ, ವೀಕ್ಷಿತ ಅರ್ಬಿಗುಡ್ಡೆ, ಶ್ರೀಮತಿ ಗೀತಾ ಸರಪಾಡಿ ಮೊದಲಾದವರು ಭಾಗವಹಿಸಿದ್ದರು. ಬಂಟ್ವಾಳ ತಾಲೂಕು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಉಮೇಶ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment