ಅಂತಿಮ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ದುಬೈ ಕಿಂಗ್ಸ್ ತಂಡದ ಆಟಗಾರ ಯೂನುಸ್ ದಾಸರಗುಡ್ಡೆ |
ಬಂಟ್ವಾಳ, ಎಪ್ರಿಲ್ 29, 2024 (ಕರಾವಳಿ ಟೈಮ್ಸ್) : ಯಂಗ್ ಫ್ರೆಂಡ್ಸ್ ಆಲಡ್ಕ-ಪಾಣೆಮಂಗಳೂರು ಆಯೋಜಿಸಿದ 6ನೇ ಆವೃತ್ತಿಯ “ಆಲಡ್ಕ ಚಾಂಪಿಯನ್ಸ್ ಲೀಗ್ (ಎಸಿಎಲ್)-2024 ಸೀಸನ್-6” ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಿಯಲ್ಲಿ ಫಾರೂಕ್ ಹಾಗೂ ಸಾಬಿತ್ ಮಾಲಕತ್ವದ ದುಬೈ ಕಿಂಗ್ಸ್ ತಂಡ ಚಾಂಪಿಯನ್ ಅಗಿ ಮೂಡಿ ಬಂದಿದೆ.
ಇಲ್ಲಿನ ಆಲಡ್ಕ ಮೈದಾನದಲ್ಲಿ ಭಾನುವಾರ (ಎಪ್ರಿಲ್ 28) ಸಂಜೆ ಟೀಂ-94 ತಂಡದ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ದುಬೈ ಕಿಂಗ್ಸ್ ತಂಡದ ಆಟಗಾರ ಯೂನುಸ್ ದಾಸರಗುಡ್ಡೆ ಅವರು ಅಂತಿಮ ಎಸೆತದಲ್ಲಿ ಸಿಡಿಸಿದ ಭರ್ಜರಿ ಸಿಕ್ಸರ್ ನೊಂದಿಗೆ ಪಂದ್ಯಾಟ ರೋಚಕ ಟೈ ಮೂಲಕ ಅಂತ್ಯಗೊಂಡಿತು. ಬಳಿಕ ನಡೆದ ನಾಣ್ಯ ಚಿಮ್ಮುಗೆಯ ಅದೃಷ್ಟದಾಟದಲ್ಲಿ ದುಬೈ ಕಿಂಗ್ಸ್ ವಿಜಯಿಯಾಗುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಶರೀಫ್ ಹಾಗೂ ತಮೀಝ್ ಮಾಲಕತ್ಸದ ಟೀಂ-94 ತಂಡವು ರನ್ನರ್ಸ್ ಆಗಿ ಮೂಡಿ ಬಂತು.
ದುಬೈ ಕಿಂಗ್ಸ್ ತಂಡದ ಸಿಕ್ಸರ್ ವೀರ ಯೂನುಸ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರೆ, ಅನೀಸ್ ಸರಣಿ ಶ್ರೇಷ್ಠ ಹಾಗೂ ಇಕ್ಮಲ್ ಉತ್ತಮ ಬೌಲರ್ ಪ್ರಶಸ್ತಿ ಪಡೆದುಕೊಂಡರು. ಟೀಂ-94 ತಂಡದ ಶಾನವಾಝ್ ಉತ್ತಮ ದಾಂಡುಗಾರ ಪ್ರಶಸ್ತಿ ಪಡೆದುಕೊಂಡರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕ್ ಸಿದ್ದೀಕ್, ದ ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೋನಾಕ ಮೆಲ್ಕಾರ್, ಶಾರೂಕ್ ಬೊಳ್ಳಾಯಿ, ಹನೀಫ್ ಬಂಗ್ಲೆಗುಡ್ಡೆ, ಫಾರೂಕ್ ಟೆನ್ ಸ್ಪೋಟ್ರ್ಸ್, ಝುಬೈರ್ ಯು, ಹಿಶಾಂ ಬಿಎಂಬಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಕ್ರೀಡಾ ಸಂಘಟಕರಾದ ಜಮಾಲ್ ಬಂಗ್ಲೆಗುಡ್ಡೆ, ಮುನೀಬ್ ಬಂಗ್ಲೆಗುಡ್ಡೆ, ಮುನೀರ್ ಆಲಡ್ಕ, ನವೀದ್, ಹಫೀಝ್, ರಬಿ, ಕಬೀರ್ ಮೊದಲಾದವರು ಉಪಸ್ಥಿತರಿದ್ದರು.
ರಶೀದ್ ಕತಾರ್, ಮುಸ್ತಫಾ ಪಿ ಜೆ ತೀರ್ಪುಗಾರರಾಗಿ ಸಹಕರಿಸಿದರು. ಅನಸ್ ಗೂಡಿನಬಳಿ ವೀಕ್ಷಕ ವಿವರಣೆ ನೀಡಿದರು. ರಫೀಕ್ ಗೂಡಿನಬಳಿ ಸ್ಕೋರರ್ ಆಗಿ ಸಹಕರಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಕೂಟದಲ್ಲಿ ಅಶ್ವೀರ್ ಮಾಲಕತ್ವದ ಟೀ-887, ಶಫೀಕ್ ಮಾಲಕತ್ವದ ಶಾನ್ ವಾರಿಯರ್ಸ್, ರಬೀ ಹಾಗೂ ಮುನೀರ್ ಮಾಲಕತ್ವದ ಅಡ್ಡೆ ಬಾಯ್ಸ್ ತಂಡಗಳು ಭಾಗವಹಿಸಿತ್ತು.
0 comments:
Post a Comment